ಸಂಶೋಧನಾ ಕ್ಷೇತ್ರ ಹಾಗೂ ಆಡಳಿತಾತ್ಮಕ ಕಾರ್ಯಗಳಲ್ಲಿ ವಹಿಸುತ್ತಿರುವ ಪಾತ್ರ
ನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿವಿ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಹಾಗೂ ಭೂಗೋಳಶಾಸ್ತ್ರ ಅಧ್ಯಯನ ವಿಭಾಗವು ರುಸಾ ಪ್ರಾಯೋಜಿತ ಭೂ-ಮಾಹಿತಿಶಾಸ್ತ್ರ ಮತ್ತು ಭೂ ಸಮೀಕ್ಷೆ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಿತ್ತು.ಈ ಕಾರ್ಯಾಗಾರ ಉದ್ಘಾಟಿಸಿದ ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ಅವರು, ಭೂ ಸಮೀಕ್ಷೆಯಲ್ಲಿನ ಟೋಟಲ್ ಸ್ಟೇಷನ್, ಜಿಪಿಎಸ್ ಮತ್ತು ಡ್ರೋನ್ ಸರ್ವೆಯಿಂಗ್ ಮೊದಲಾದ ಆಧುನಿಕ ತಂತ್ರಜ್ಞಾನಗಳ ಮಹತ್ವ, ಇವು ಸಂಶೋಧನಾ ಕ್ಷೇತ್ರ ಹಾಗೂ ಆಡಳಿತಾತ್ಮಕ ಕಾರ್ಯಗಳಲ್ಲಿ ವಹಿಸುತ್ತಿರುವ ಪಾತ್ರವನ್ನು ವಿವರಿಸಿದರು.ಅಟ್ಲಾಷೈನ್ ಪ್ರೈ.ಲಿ. ಎಂಡಿ ಡಾ. ಸುರೇಶ್ ಚಿತ್ರಾಪು ಅವರು, ನೈಜ ಭೂ ಸಮೀಕ್ಷಾ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿದರು.ಸಂದರ್ಶಕ ಪ್ರಾಧ್ಯಾಪಕ ರಾಮು ಅವರು, ಜಾಗತಿಕ ಮಟ್ಟದಲ್ಲಿ ಜಿಐಎಸ್ ನ ವಿಸ್ತಾರ ಮತ್ತು ಅನ್ವಯಿಕತೆ ವಿವರಿಸಿದರು. ವಿಭಾಗದ ಅಧ್ಯಕ್ಷ ಪ್ರೊ. ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಡಾ. ಪಾಪಣ್ಣ, ಡಾ. ರಮ್ಯಾ, ಕೃತಿಕಾ ಇದ್ದರು. ಸಂಯೋಜಕಿ ಪ್ರೊ. ಜಯಶ್ರೀ ಸ್ವಾಗತಿಸಿದರು. ಡಾ. ರೇಖಾ ವಂದಿಸಿದರು.