ಸಾರಾಂಶ
ದಾಬಸ್‍ಪೇಟೆ: ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿಯಲ್ಲಿ ರಸ್ತೆಗೆ ಮಣ್ಣು ಹಾಕುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು ಅದೇ ಗ್ರಾಮದ ಪ್ರೇಮ್ ಕುಮಾರ್, ಜಯಲಕ್ಷ್ಮಮ್ಮ ಮತ್ತು ಮಹಿಮೆಗೌಡರ ವಿರುದ್ಧ ದಾಬಸ್‍ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ದಾಬಸ್‍ಪೇಟೆ: ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿಯಲ್ಲಿ ರಸ್ತೆಗೆ ಮಣ್ಣು ಹಾಕುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು ಅದೇ ಗ್ರಾಮದ ಪ್ರೇಮ್ ಕುಮಾರ್, ಜಯಲಕ್ಷ್ಮಮ್ಮ ಮತ್ತು ಮಹಿಮೆಗೌಡರ ವಿರುದ್ಧ ದಾಬಸ್‍ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಲಾಟೆಯಲ್ಲಿ ನಾಗರತ್ನ ಎಡಗೈ ರೆಟ್ಟೆ ಕೀಲು, ಎದೆಯ ಭಾಗ ಹಾಗೂ ಮುಂಗೈಗೆ ಏಟಾಗಿದ್ದು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕೆಂಗಲ್ ಕೆಂಪೋಹಳ್ಳಿ ಗ್ರಾಮದ ಸರ್ವೇ ನಂ.12/1ರಲ್ಲಿ ಜಮೀನಿನಲ್ಲಿ ಸೀಟಿನ ಮನೆ ಕಟ್ಟಿಕೊಂಡು ನಾಗರತ್ನ ಮತ್ತು ಅವರ ತಾಯಿ ರಾಜಮ್ಮ ಅವರು ವಾಸಿಸುತ್ತಿದ್ದಾರೆ. ಇದೆ ಜಮೀನಿನ ಪಕ್ಕ ಸರ್ವೇ ನಂ.11 ಚಿಕ್ಕ ಮಹಿಮೇಗೌಡರ ಹೆಸರಿನಲ್ಲಿರುವ ಮಹಿಮ ರಂಗನಾಥಸ್ವಾಮಿ ಮಾನ್ಯದ ಜಮೀನಿದೆ. ಇದೇ ಜಮೀನಿನ ಮೂಲಕ ನಾಗರತ್ನ ಮನೆಗೆ ಮಣ್ಣಿನ ರಸ್ತೆ ಇದ್ದು, 18 ವರ್ಷಗಳಿಂದ ಈ ರಸ್ತೆ ಮೂಲಕ ಓಡಾಡುತ್ತಿದ್ದರು.
ನಾಗರತ್ನ ಅವರಿಗೆ ಇತ್ತೀಚೆಗೆ ಕಾಲಿಗೆ ಏಟಾಗಿದ್ದು, ಜೊತೆಗೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದರಿಂದ ರಸ್ತೆಗೆ ಮಣ್ಣು ಹೊಡೆಸಲು ಮುಂದಾದಾಗ, ಪ್ರೇಮ್ ಕುಮಾರ್, ಜಯಲಕ್ಷ್ಮಮ್ಮ ಮತ್ತು ಮಹಿಮೇಗೌಡ ಜಾಗ ಬಿಡುವುದಿಲ್ಲ ಎಂದು ಅಡ್ಡಿಪಡಿಸಿದ್ದಾರೆ.ಇದು ಮಾನ್ಯದ ಜಮೀನು ಎಂದು ನಾಗರತ್ನ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆಂದು ನಾಗರತ್ನ ಅವರ ಸಹೋದರಿ ರಾಮಲಕ್ಷ್ಮಿ ದಾಬಸ್‍ಪೇಟೆ ಠಾಣೆಯಲ್ಲಿ ಪ್ರಕರಣ ದಾಖಸಿದ್ದಾರೆ.
ಪೋಟೋ 7 : ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ ರಸ್ತೆಗೆ ಮಣ್ಣು ಹಾಕುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ಆಗುತ್ತಿರುವುದು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))