ಸ್ನೇಹಿತರಿಬ್ಬರು ಸ್ನಾನಕ್ಕೆಂದು ನದಿಗೆ ತೆರಳಿದ ವೇಳೆ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ದಾರುಣ ಸಾವು

| Published : Dec 02 2024, 01:21 AM IST / Updated: Dec 02 2024, 11:49 AM IST

Ganga River
ಸ್ನೇಹಿತರಿಬ್ಬರು ಸ್ನಾನಕ್ಕೆಂದು ನದಿಗೆ ತೆರಳಿದ ವೇಳೆ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ದಾರುಣ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯರು ಇಬ್ಬರನ್ನೂ ನದಿಯಿಂದ ಮೇಲಕ್ಕೆ ಎತ್ತಿ ತಂದಿದ್ದಾರೆ. ಮೃತ ಶ್ರೀಶ ಆಚಾರ್ಯ ಎಸ್.ಆರ್ ಸ್ಕೂಲ್ ಹೆಬ್ರಿಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಜಯಂತ್ ನಾಯ್ಕ್ ಈ ಹಿಂದೆ ಮಂದಾರ್ತಿ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿದ್ದು, ಸ್ವಲ್ಪ ಸಮಯದಿಂದ ಮೇಳ ತ್ಯಜಿಸಿದ್ದರು ಎನ್ನಲಾಗಿದೆ.

  ಕುಂದಾಪುರ : ಸ್ನೇಹಿತರಿಬ್ಬರು ಸ್ನಾನಕ್ಕೆಂದು ನದಿಗೆ ತೆರಳಿದ ವೇಳೆ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಘಟನೆ ಭಾನುವಾರ ಮಧ್ಯಾಹ್ನ ತಾಲೂಕಿನ ಬೆಳ್ವೆಯಲ್ಲಿ ನಡೆದಿದೆ. ಬೆಳ್ವೆ ಶ್ರೀಧರ ಆಚಾರ್ಯ ಅವರ ಪುತ್ರ ಶ್ರೀಶ ಆಚಾರ್ಯ (14), ಗುಮ್ಮಾಲ ರಾಮ ನಾಯ್ಕ್ ಅವರ ಪುತ್ರ ಜಯಂತ್ ನಾಯ್ಕ್ (19) ಮೃತರು.

ಜಯಂತ್ ನಾಯ್ಕ್ ಹಾಗೂ ಶ್ರೀಶ ಆಚಾರ್ಯ ತಮ್ಮ‌ ಸ್ನೇಹಿರೊಂದಿಗೆ ಭಾನುವಾರ ಮಧ್ಯಾಹ್ನ ಗುಮ್ಮಾಲ ಬಳಿ ಇರುವ ಸೀತಾ ನದಿಗೆ ಈಜಲು ತೆರಳಿದ್ದರು. ಈ ವೇಳೆ ಶ್ರೀಶ ಆಚಾರ್ಯ ಬಂಡೆ ಮೇಲಿಂದ ಕಾಲು ಜಾರಿ ನದಿಗೆ ಬಿದ್ದಿದ್ದು ಆತನನ್ನು ರಕ್ಷಿಸಲು ಹೋದ ಜಯಂತ್ ನಾಯ್ಕ್ ನೀರಿನ ಸೆಳೆತಕ್ಕೆ ಸಿಲುಕಿದ್ದರು. ತಕ್ಷಣ ಜೊತೆಗಿದ್ದ ಸ್ನೇಹಿತರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳೀಯರಾದ ಲಕ್ಷ್ಮಣ ಮತ್ತು ನಾಗರಾಜ ನದಿಗೆ ಹಾರಿ ಇಬ್ಬರನ್ನು ರಕ್ಷಿಸಲು ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಇಬ್ಬರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದರು.

ಸ್ಥಳೀಯರು ಇಬ್ಬರನ್ನೂ ನದಿಯಿಂದ ಮೇಲಕ್ಕೆ ಎತ್ತಿ ತಂದಿದ್ದಾರೆ. ಮೃತ ಶ್ರೀಶ ಆಚಾರ್ಯ ಎಸ್.ಆರ್ ಸ್ಕೂಲ್ ಹೆಬ್ರಿಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಜಯಂತ್ ನಾಯ್ಕ್ ಈ ಹಿಂದೆ ಮಂದಾರ್ತಿ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿದ್ದು, ಸ್ವಲ್ಪ ಸಮಯದಿಂದ ಮೇಳ ತ್ಯಜಿಸಿದ್ದರು ಎನ್ನಲಾಗಿದೆ.

ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿ ನಾಸಿರ್ ಹುಸೇನ್, ಎಸ್ಐ ಶಂಭುಲಿಂಗ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.