ಸಾರಾಂಶ
ತುರುವೇಕೆರೆ: ತಾಲೂಕಿನಾದ್ಯಂತ ಚಿರತೆ ದಾಳಿ ಮುಂದುವರೆದಿದೆ. ತಾಲೂಕಿನ ಬಾಣಸಂದ್ರ ಗ್ರಾಮದಲ್ಲೇ ಚಿರತೆ ದಾಳಿಗೆ ಎರಡು ಹೋತಗಳು ಬಲಿಯಾಗಿವೆ.
ತುರುವೇಕೆರೆ: ತಾಲೂಕಿನಾದ್ಯಂತ ಚಿರತೆ ದಾಳಿ ಮುಂದುವರೆದಿದೆ. ತಾಲೂಕಿನ ಬಾಣಸಂದ್ರ ಗ್ರಾಮದಲ್ಲೇ ಚಿರತೆ ದಾಳಿಗೆ ಎರಡು ಹೋತಗಳು ಬಲಿಯಾಗಿವೆ.
ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ವಾಸವಿರುವ ರೈತ ರಮೇಶ್ ರವರು ತಮ್ಮ ಮನೆಯ ಪಕ್ಕ ನಿರ್ಮಿಸಿಕೊಂಡಿರುವ ಕೊಟ್ಟಿಗೆಗೆ ಬೆಳಗಿನ ಜಾವ ಚಿರತೆ ನುಗ್ಗಿದೆ. ಆ ವೇಳೆ ಕೊಟ್ಟಿಗೆಯಲ್ಲಿದ್ದ ಹೋತಗಳು ಕಿರುಚಾಡಿವೆ. ರಮೇಶ್ ರವರು ಶಬ್ದ ಕೇಳಿ ಓಡಿ ಬರುವ ವೇಳೆಯಲ್ಲಿ ಚಿರತೆ ಎರಡು ಹೋತಗಳ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿ ಕೊಂದಿದೆ. ಇದನ್ನು ಕಂಡು ಕೂಗಾಡಿದ್ದಾರೆ. ಹೋತಗಳನ್ನು ಕಟ್ಟಿದ್ದರಿಂದ ಚಿರತೆ ಅವುಗಳನ್ನು ಬೇರೆಡೆ ಹೊತ್ತೊಯ್ಯಲು ಸಾಧ್ಯವಾಗದೆ ಅಲ್ಲಿಯೇ ಬಿಟ್ಟು ಪರಾರಿಯಾಗಿದೆ. ಈ ಘಟನೆಯಿಂದ ಬಾಣಸಂದ್ರ ಸೇರಿದಂತೆ ಆಸುಪಾಸಿನ ಗ್ರಾಮಸ್ಥರು ತಮ್ಮ ತೋಟ, ಹೊಲಗಳಿಗೆ ದನಕರು, ಕುರಿ, ಮೇಕೆ ಮೇಯಿಸಲು ಹೋಗಲು ಹೆದರುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೋನಿಟ್ಟು ಚಿರತೆ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.