ಮೂಡುಬಿದಿರೆಗೆ ಜೈನ ಮುನಿದ್ವಯರ ಪುರಪ್ರವೇಶ

| Published : Apr 13 2024, 01:04 AM IST

ಸಾರಾಂಶ

ಶ್ರೀ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಗುರುಗಳ ಪಾದಪೂಜೆ ನೆರವೇರಿಸಿ ಸಿದ್ಧಾಂತ ದರ್ಶನ, ರತ್ನ ಬಿಂಬ ದರ್ಶನ ,18 ಬಸದಿ ದರ್ಶನ ನೆರವೇರಿತು. ಕುಂಥು ಸಾಗರ ಮುನಿ ಮಹಾರಾದ್‌ ಅವರು ಮೂಡುಬಿದಿರೆಯಲ್ಲಿ ನಾಲ್ಕು ದಿನ ಮೊಕ್ಕಾಂ ಹೂಡಲಿದ್ದಾರೆ.

ಮೂಡುಬಿದಿರೆ: ಜೈನ ಕಾಶಿ ಮೂಡುಬಿದಿರೆಗೆ 108 ಪೂರಣ ಸಾಗರ್ ಮುನಿ ಶುಕ್ರವಾರ ಕಾರ್ಕಳದಿಂದ ಆಗಮಿಸಿ ಪುರಪ್ರವೇಶ ಮಾಡಿದರು. ಗುರುವಾರ 108 ಕುಂಥು ಸಾಗರ ಮುನಿ ಮಹಾರಾಜ್ ಪುರಪ್ರವೇಶ ಮಾಡಿದ್ದು ಈ ಇಬ್ಬರು ದಿಗಂಬರ ಮುನಿಗಳು ರಾಷ್ಟ್ರಸಂತ ಆಚಾರ್ಯ ವಿದ್ಯಾಸಾಗರರ ಶಿಷ್ಯರಾಗಿದ್ದಾರೆ.

ಶ್ರೀ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಗುರುಗಳ ಪಾದಪೂಜೆ ನೆರವೇರಿಸಿ ಸಿದ್ಧಾಂತ ದರ್ಶನ, ರತ್ನ ಬಿಂಬ ದರ್ಶನ ,18 ಬಸದಿ ದರ್ಶನ ನೆರವೇರಿತು. ಕುಂಥು ಸಾಗರ ಮುನಿ ಮಹಾರಾದ್‌ ಅವರು ಮೂಡುಬಿದಿರೆಯಲ್ಲಿ ನಾಲ್ಕು ದಿನ ಮೊಕ್ಕಾಂ ಹೂಡಲಿದ್ದಾರೆ.

ಸನತ್ ಕುಮಾರ್, ರಾಕೇಶ್ ಜೈನ್, ಮಹಾಲಕ್ಷ್ಮೀ, ರೋಹಿಣಿ, ಸುರಕ್ಷಾ ಮೊದಲಾದವರು ಇದ್ದರು. ಸಂಜೆ ಗುರುಗಳ ಆರತಿ, ಸ್ವಾಧ್ಯಯ ಕಾರ್ಯಕ್ರಮ ಶ್ರೀ ಮಠದಲ್ಲಿ ನಡೆಯಿತು.