ಬೈಕ್-ಟಂಟಂ ಅಫಘಾತದಲ್ಲಿ ಇಬ್ಬರ ಸಾವು

| Published : Mar 16 2024, 01:49 AM IST

ಬೈಕ್-ಟಂಟಂ ಅಫಘಾತದಲ್ಲಿ ಇಬ್ಬರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಹುನಗುಂದ ಬೆಳಗಾವಿ - ರಾಯಚೂರ ರಾಷ್ಟ್ರೀಯ ಹೆದ್ದಾರಿ 20ರ ನಾಗೂರ ಕ್ರಾಸ್ ಬಳಿ ಟಂಟಂ ವಾಹನ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಗುರವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಹುನಗುಂದ ಬೆಳಗಾವಿ - ರಾಯಚೂರ ರಾಷ್ಟ್ರೀಯ ಹೆದ್ದಾರಿ 20ರ ನಾಗೂರ ಕ್ರಾಸ್ ಬಳಿ ಟಂಟಂ ವಾಹನ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಗುರವಾರ ರಾತ್ರಿ ನಡೆದಿದೆ.

ಹುನಗುಂದ ತಾಲೂಕಿನ ಹೊನ್ನರಹಳ್ಳಿ ಗ್ರಾಮದ ವೀರನಗೌಡ ಮುದ್ದಿನಗೌಡ ಪವಾಡಗೌಡ್ರ (48), ಲಿಂಗಸೂರ ತಾಲೂಕಿನ ಬೋಗಾಪೂರದ ಅಭಿಷೇಕ (25) ಮೃತಪಟ್ಟವರು. ಸ್ಥಳಕ್ಕೆ ಬಾಗಲಕೋಟ ಎಎಸ್‌ಪಿ ಪ್ರಸನ್ನ ದೇಸಾಯಿ, ಹುನಗುಂದ ಸಿಪಿಐ ಸುನೀಲ ಸವದಿ, ಪಿಎಸ್‌ಐ ಲಕ್ಕಪ್ಪ ಜೋಡಹಟ್ಟಿ ಆಗಮಿಸಿ ಪರಿಶೀಲನೆ ನಡೆಸಿದರು. ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.