ಸಾರಾಂಶ
ಪಾವಗಡದಲ್ಲಿ ಎರಡು ಕಿಮಿ ಮಾನವ ಸರಪಳಿ
ಕನ್ನಡಪ್ರಭ ವಾರ್ತೆ ಪಾವಗಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆಯಲ್ಲಿ ಭಾನುವಾರ ಎರಡು ಕಿಲೋಮೀಟರ್ ಉದ್ದದ ಮಾನವ ಸರಪಳಿ ನಿರ್ಮಾಣ ಮಾಡಲಾಗಿತ್ತು. ಅಂತಾರಾಷ್ಟ್ರೀಯ ದಿನಾಚರಣೆಯ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ
ಪಟ್ಟಣದ ಚಳ್ಳಕರೆ ಹಾಗೂ ತುಮಕೂರು ರಸ್ತೆ ಸೇರಿ ಎರಡು ಕಿಲೋಮೀಟರ್ ಉದ್ದದ ಮಾನವ ಸರಪಳಿ ನಿರ್ಮಾಣ ಮಾಡಿದ್ದು ಇಲ್ಲಿನ ಶ್ರೀಶನೇಶ್ವರಸ್ವಾಮಿ ವೃತ್ತದ ಬಳಿ ಮಾನವ ಸರಪಳಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಈ ವೇಳೆ ಬಿಇಒ ಇಂದ್ರಾಣಮ್ಮ ಮಾತನಾಡಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದ್ದು ಇದು ಕರ್ನಾಟಕ ಒಂದು ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿದೆ ಎಂದರು.ಈ ವೇಳೆ ಮುಖಂಡರಾದ ಬಂಗಾರಪ್ಪ ಭೋವಿ,ಬಿಸಿಎಂ ಇಲಾಖೆ ಸಹಾಯಕ ವಿಸ್ತಾರಣಾಧಿಕಾರಿ ಗೋಪಾಲಪ್ಪ, ಕಡಪಲಕರೆ ಹನುಮಂತರಾಯಪ್ಪ,ಡಿಜೆಎಸ್ ನಾರಾಯಣಪ್ಪ,ವಳ್ಳೂರು ನಾಗೇಶ್, ಟಿ.ಎನ್.ಪೇಟೆ ರಮೇಶ್, ವಕೀಲ ರವೀಂದ್ರ, ಕಡಪಲಕರೆ ಪಾತಲಿಂಗಪ್ಪ,ನರಸಿಂಹಪ್ಪ ಇತರರಿದ್ದರು.