ಸಾರಾಂಶ
ರಾಮನಗರ: ವಾಹನ ಪಾರ್ಕಿಂಗ್ ವಿಚಾರವಾಗಿ ಪೇದೆಗಳಿಬ್ಬರು ಜಗಳ ಮಾಡಿಕೊಂಡ ಘಟನೆ ನಗರದ ಐಜೂರು ವೃತ್ತದಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದೆ.
ರಾಮನಗರ: ವಾಹನ ಪಾರ್ಕಿಂಗ್ ವಿಚಾರವಾಗಿ ಪೇದೆಗಳಿಬ್ಬರು ಜಗಳ ಮಾಡಿಕೊಂಡ ಘಟನೆ ನಗರದ ಐಜೂರು ವೃತ್ತದಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದೆ.
ನಗರದ ಐಜೂರು ಪೊಲೀಸ್ ಠಾಣೆ ಮಹಿಳಾ ಪೇದೆ ರುಕ್ಮಿಣಿ ಮತ್ತು ಸಂಚಾರ ಪೊಲೀಸ್ ಠಾಣೆ ಪೇದೆ ಮೋಹನ್ ವಾಗ್ವಾದ ಮಾಡಿಕೊಂಡು ಸಾರ್ವಜನಿಕರ ಟೀಕೆಗೆ ಗುರಿಯಾದವರು.ಐಜೂರು ವೃತ್ತದಲ್ಲಿ ಮಂಗಳವಾರ ಮಧ್ಯಾಹ್ನ ಪೇದೆ ಮೋಹನ್ ಡ್ಯೂಟಿಯಲ್ಲಿದ್ದರು. ಈ ವೇಳೆ ಪೇದೆ ರುಕ್ಮಿಣಿ ವಿರುದ್ಧ ದಿಕ್ಕಿನಲ್ಲಿ ಬಂದು ಅಪೋಲೊ ಮೆಡಿಕಲ್ ಸ್ಟೋರ್ ಬಳಿ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಲು ಮುಂದಾಗಿದ್ದಾರೆ.
ಈ ವಿಚಾರವಾಗಿ ಇಬ್ಬರ ನಡುವೆ ಸಣ್ಣದಾಗಿ ಮಾತಿನ ಚಕಮಕಿ ಏರ್ಪಟ್ಟಿತ್ತು. ಇಬ್ಬರು ಒಬ್ಬರಿಗೊಬ್ಬರು ಏಕ ವಚನದಲ್ಲಿ ಬೈದುಕೊಂಡಿದ್ದಾರೆ. ಸ್ಥಳದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ನಾಗರಾಜು ಇಬ್ಬರ ಜಗಳವನ್ನು ಬಿಡಿಸಿ ಸಮಾಧಾನ ಮಾಡಿದರು. ಆದರೂ ರುಕ್ಮಿಣಿಯವರು ಮೋಹನ್ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಕ್ಯಾತೆ ತೆಗೆಯುತ್ತಿದ್ದರು. ಸ್ಥಳದಲ್ಲಿದ್ದ ಸಾರ್ವಜನಿಕರು ರುಕ್ಮಿಣಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.---------------------------
1ಕೆಆರ್ ಎಂಎನ್ 7.ಜೆಪಿಜಿರಾಮನಗರದ ಐಜೂರು ವೃತ್ತದಲ್ಲಿ ಪೇದೆಗಳಾದ ಮೋಹನ್ ಮತ್ತು ರುಕ್ಮಿಣಿ ಜಗಳದಲ್ಲಿ ತೊಡಗಿರುವುದು.
---------------------------