ಜಗಳೂರು: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ವಿದ್ಯಾರ್ಥಿಗಳ ಸಾವು

| Published : Oct 01 2024, 01:19 AM IST

ಜಗಳೂರು: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ವಿದ್ಯಾರ್ಥಿಗಳ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು ತಾಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ 4ನೇ ತರಗತಿಯ ಇಬ್ಬರು ಮಕ್ಕಳು ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಜಗಳೂರು: ತಾಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ 4ನೇ ತರಗತಿಯ ಇಬ್ಬರು ಮಕ್ಕಳು ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಗಂಗೋತ್ರಿ (11) ಹಾಗೂ ತನುಜಾ (11) ಮೃತಪಟ್ಟ ವಿದ್ಯಾರ್ಥಿಗಳು. ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಪಕ್ಕದ 50 ಮೀಟರ್ ದೂರದಲ್ಲೇ ಕೃಷಿ ಹೊಂಡವಿದೆ. ಶಾಲೆ ಬಿಟ್ಟ ನಂತರ ಮೂವರು ವಿದ್ಯಾರ್ಥಿಗಳು ಕೃಷಿ ಹೊಂಡದ ದಡದ ಮೇಲೆ ಆಟ ಆಡುತ್ತಿದ್ದರು. ಈ ವೇಳೆ ಗಂಗೋತ್ರಿ, ತನುಜಾ ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದಿದ್ದಾರೆ.

5ನೇ ತರಗತಿಯ ಖುಷಿ ಜೋರಾಗಿ ಕೂಗಿಕೊಂಡಿದ್ದನ್ನು ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದರು. ಹೊಂಡದಲ್ಲಿ ಬಿದ್ದ ಇಬ್ಬರು ಮಕ್ಕಳನ್ನು ಮೇಲೆತ್ತಿ ದಡಕ್ಕೆ ತಂದರು. ಅಷ್ಟರೊಳಗೆ ಗಂಗೋತ್ರಿ, ತನುಜಾ ಮೃತಪಟ್ಟಿದ್ದರು. ಮಕ್ಕಳು ಸಾವು ನೋಡಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಮೃತ ವಿದ್ಯಾರ್ಥಿಗಳ ತಂದೆ -ತಾಯಿ ಕೂಲಿ ಕೆಲಸಕ್ಕೆ ಹೊರಗಡೆ ಹೋಗಿದ್ದರು. ಅಜ್ಜಿಯ ಜೊತೆಯಲ್ಲಿದ್ದ ಮಕ್ಕಳು ಶಾಲೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಬಿಳಿಚೋಡು ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

- - -