ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು

| Published : Nov 13 2025, 01:45 AM IST

ಸಾರಾಂಶ

ಹಾದ್ರೆ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದ್ರೆ ಹೆರೂರು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಸುಂಟಿಕೊಪ್ಪ ಪೊಲೀಸ್‌ ಠಾಣಾ ವ್ಯಾಪ್ತಿಯ ನಾಕೂರು ಶಿರಂಗಾಲ ಗ್ರಾಮದ ಹಾದ್ರೆ ಹೆರೂರು ಹಾರಂಗಿ ಹಿನ್ನೀರಿನಲ್ಲಿ ಮಡಿಕೇರಿ ಪದವಿಪೂರ್ವ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಮಡಿಕೇರಿ ರಾಣಿಪೇಟೆ ನವೀನ್ ಪೊನ್ನಪ್ಪ (17) , ಹೆಬ್ಬೇಟ್ಟಗೇರಿ ವಿದ್ಯಾರ್ಥಿ ಚಂಗಪ್ಪ (17) ಮತ್ತು ಮಡಿಕೇರಿ ರಾಜಸೀಟ್ ತರುಣ್ ತಮ್ಮಯ್ಯ(17) ಎಂಬುವರು ಮೂವರು ವಿದ್ಯಾರ್ಥಿಗಳು ಸ್ನಾನಕ್ಕೆಂದು ನೀರಿಗೆ ಇಳಿದಿದ್ದಾರೆ ಎನ್ನಲಾಗಿದೆ. ಇರ್ವರು ವಿದ್ಯಾರ್ಥಿಗಳು ಮೇಲಕ್ಕೆ ಬರಲಾಗದೇ ಚಂಗಪ್ಪ, ಮತ್ತು ತರುಣ್ ತಿಮ್ಮಯ್ಯ ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ಅದೃಷ್ಟವಶಾತ್ ಓರ್ವ ವಿದ್ಯಾರ್ಥಿ ನವೀನ್ ಪೊನ್ನಪ್ಪ ಎಂಬಾತ ಘಟನೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸಿಬ್ಬಂದಿ, ಅಗ್ನಿಶಾಮಕ ದಳದವರು, ದುಬಾರೆ ರ‍್ಯಾಪ್ಟಿಂಗ್ ಸಿಬ್ಬಂದಿ, ಮೃತ ದೇಹಗಳನ್ನು ಹುಡುಕಾಟ ನಡೆಸಿ ಚಂಗಪ್ಪ ಅವರ ಮೃತ ದೇಹವನ್ನು ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿಯ ಮೃತ ದೇಹವನ್ನು ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

------------------------------------------------------------------------

ಇಂದು ಕನ್ನಡಪ್ರಭದಿಂದ ಚಿತ್ರಕಲಾ ಸ್ಪರ್ಧೆಕನ್ನಡಪ್ರಭ ವಾರ್ತೆ ವಿರಾಜಪೇಟೆಕನ್ನಡಪ್ರಭ, ಲಿಟಲ್ ಸ್ಕಾಲರ್ಸ್ ಅಕಾಡೆಮಿ ವಿರಾಜಪೇಟೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ನ.13ರಂದು ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.4 ಮತ್ತು 5, 6 ಮತ್ತು 7 ಹಾಗೂ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ವಿಭಾಗದಲ್ಲಿ ಅರಣ್ಯ/ವನ್ಯಜೀವಿ ವಿಷಯದ ಬಗ್ಗೆ ವರ್ಣಚಿತ್ರ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಪೂಜಾ ಸಜೇಶ್ ಉದ್ಘಾಟಿಸಲಿದ್ದಾರೆ. ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್. ಜಗನ್ನಾಥ್, ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರತಿಮಾ ರಾಜನ್, ವಿರಾಜಪೇಟೆ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಶಬೀರ್, ವಿರಾಜಪೇಟೆಯ ಹಿಂದು ಮಲೆಯಾಳಿ ಸಂಘದ ಅಧ್ಯಕ್ಷ ಹಾಗೂ ಸಮಾಜ ಸೇವಕ ವಿನೂಪ್ ಕುಮಾರ್.ಎ, ವಿರಾಜಪೇಟೆಯ ಶಿಕ್ಷಕರಾದ ಕೆ.ವಿ. ಪೌಲೋಸ್ ಪಾಲ್ಗೊಳ್ಳಲಿದ್ದಾರೆ.