ದ್ವಿಚಕ್ರ ವಾಹನ ಮುಖಾಮುಖಿ: ಸವಾರರಿಗೆ ಗಂಭೀರ ಗಾಯ

| Published : Nov 14 2025, 03:45 AM IST

ಸಾರಾಂಶ

ದ್ವಿ ಚಕ್ರ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ 2 ವಾಹನಗಳಲ್ಲಿದ್ದ ಸವಾರರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ದ್ವಿಚಕ್ರ ವಾಹನಗಳು ಮುಖಾಮುಖಿಯಾದ ಪರಿಣಾಮ 2 ವಾಹನಗಳಲ್ಲಿದ್ದ ಸವಾರರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ. ಬುಧವಾರ ರಾತ್ರಿ ಸುಂಟಿಕೊಪ್ಪ ರಾಮ ಬಡಾವಣೆಯ ಎಸ್.ಎಸ್ ಸೂಪರ್ ಮಾರ್ಕೆಟ್ ಮುಂಭಾಗದಲ್ಲಿ ಘಟನೆ ನಡೆದಿದೆ.ಗದ್ದೆಹಳ್ಳ ಕಡೆಯಿಂದ ಬರುತ್ತಿದ್ದ ಯಶ್ವಂತ್ ಎಂಬುವವರ ಸ್ಕೂಟಿಗೆ ಸುಂಟಿಕೊಪ್ಪ ಪಟ್ಟಣ ಕಡೆಯಿಂದ ಗದ್ದೆಹಳ್ಳ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಯಶ್ವಂತ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಅವರನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಮತ್ತೊಂದು ಕಡೆಯಲ್ಲಿ ಸ್ಕೂಟಿಯಲ್ಲಿ ಮೂವರು ಸವಾರಿ ಮಾಡುತ್ತಿದ್ದು ಈ ಪೈಕಿ ಇರ್ವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಡಿಕ್ಕಿಯ ರಭಸಕ್ಕೆ ಎರಡೂ ದ್ವಿ ಚಕ್ರ ವಾಹನಗಳು ಸಂಪೂರ್ಣ ಜಖಂಗೊಂಡಿವೆ.

-------------------------------------

ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು: ಓರ್ವನ ಮೃತದೇಹ ಪತ್ತೆಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಹಾರಂಗಿ ಹಿನ್ನೀರಿನಲ್ಲಿ ಬುಧವಾರ ಮುಳುಗಿ ದುರ್ಮರಣಕ್ಕೀಡಾದ ಇಬ್ಬರ ಪೈಕಿ ಓರ್ವನ ಮೃತದೇಹ ಗುರುವಾರ ಪತ್ತೆಯಾಗಿದೆ.

ಬುಧವಾರ ಹಾರಂಗಿ ಹಿನ್ನೀರು ಪ್ರದೇಶ ಹಾದ್ರೆ ಹೆರೂರು ಬಳಿ ಜೆಸ್ವಿನ್ ಚೆಂಗಪ್ಪ ಮತ್ತು ತರುಣ್ ತಿಮ್ಮಯ್ಯ ದುರ್ಮರಣಕ್ಕೀಡಾಗಿದ್ದರು. ಈ ಪೈಕಿ ತರುಣ್ ತಿಮ್ಮಯ್ಯ ಅವರ ಮೃತ ದೇಹ ಗುರುವಾರ ಪತ್ತೆಯಾಗಿದೆ.ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ, ಸಿಬ್ಬಂದಿ, ಅಗ್ನಿ ಶಾಮಕ ದಳದವರು ಸತತವಾಗಿ ಕಾರ್ಯಾಚರಣೆ ನಡೆಸುವ ಮೂಲಕ ಮೃತದೇಹಗಳನ್ನು ಹಾರಂಗಿ ಹಿನ್ನೀರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಮೃತ ಸಂಬಂಧಿಕರಿಗೆ ಮೃತದೇಹಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭ ಘಟನಾ ಸ್ಥಳಕ್ಕೆ ತಹಸೀಲ್ಧಾರ್ ಕಿರಣ್ ಗೌರಯ್ಯ, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್, ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಹಾಗೂ ಸಿಬ್ಬಂದಿ ಇದ್ದರು.