ನರಸಿಂಹರಾಜಪುರನಿಮ್ಮನ್ನೇ ನಂಬಿರುವ ಕುಟುಂಬದವರನ್ನು ನೆನಪಿಸಿಕೊಂಡು ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಓಡಿಸಬೇಕು ಎಂದು ಜೆಎಂಎಫ್ ನ ಹಿರಿಯ ಸಿವಿಲ್ ನ್ಯಾಯಾಧೀಶ ರಘುನಾಥ ಗೌಡ ಸಲಹೆ ನೀಡಿದರು.
- ಅಂಬೇಡ್ಕರ್ ವೃತ್ತದಲ್ಲಿ ಚಾಲಕರಿಗೆ ಹೊಸ ಹೆಲ್ಮಟ್ ಹಾಕಿ ರಸ್ತೆ ಸುರಕ್ಷಿತೆ ಅರಿವು
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರನಿಮ್ಮನ್ನೇ ನಂಬಿರುವ ಕುಟುಂಬದವರನ್ನು ನೆನಪಿಸಿಕೊಂಡು ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಓಡಿಸಬೇಕು ಎಂದು ಜೆಎಂಎಫ್ ನ ಹಿರಿಯ ಸಿವಿಲ್ ನ್ಯಾಯಾಧೀಶ ರಘುನಾಥ ಗೌಡ ಸಲಹೆ ನೀಡಿದರು.
ಮಂಗಳವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷಿತ ಅರಿವು ಕಾರ್ಯಕ್ರಮದಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಹಾಕಿಸಿ ಹೂ ನೀಡಿದ ನಂತರ ಮಾತನಾಡಿದರು. ಪ್ರತಿಯೊಬ್ಬ ವಾಹನ ಚಾಲಕರು ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದರು.ಸಿವಿಲ್ ನ್ಯಾ. ಆರ್ ಎಸ್.ಜೀತು ಮಾತನಾಡಿ, 4 ಚಕ್ರದ ವಾಹನ ಸವಾರರು ಕಡ್ಡಾಯವಾಗಿ ಸೀಟು ಬೆಲ್ಟ್ ಹಾಕಬೇಕು.ಕುಡಿದು ವಾಹನ ಚಾಲನೆ ಮಾಡಬಾರದು. 18 ವರ್ಷದ ಒಳಗಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡಬಾರದು. ಸುಪ್ರೀಂ ಕೋರ್ಟಿನ ಆದೇಶದಂತೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸು ವುದು ಕಡ್ಡಾಯ.ಇದನ್ನು ಉಲ್ಲಂಘಿಸಿದರೆ ಪೊಲೀಸರು ದಂಡ ವಿಧಿಸುತ್ತಾರೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಗದಿಗಪ್ಪ ನೇಕಾರ್‌ಸ ಮಾತನಾಡಿ, ಹೆಲ್ಮೆಟ್ ಧರಿಸುವುದು ನಮ್ಮ ಜೀವ ರಕ್ಷಣೆಗಾಗಿ. ಅಪಘಾತವಾದಾಗ ಕೈ, ಕಾಲಿಗೆ ಪೆಟ್ಟಾದರೆ ಚಿಕಿತ್ಸೆ ಮಾಡಿಸಿಕೊಳ್ಳಬಹುದು. ಆದರೆ, ತಲೆಗೆ ಪೆಟ್ಟಾದರೆ ಜೀವ ಹೋಗುವ ಸಾಧ್ಯತೆ ಇದೆ.ಆದ್ದರಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು ಎಂದರು. ಸಿಪಿಐ ಗುರುದತ್ ಕಾಮತ್ ಮಾತನಾಡಿದರು.40 ಕ್ಕೂ ಹೆಚ್ಚು ಹೆಲ್ಮೆಟ್ ಇಲ್ಲದ ಬೈಕ್ ಸವಾರರಿಗೆ ಹೊಸ ಹೆಲ್ಮೆಟ್ ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಯಪ್ರಕಾಶ್, ಕ್ರೈಂ ಸಬ್ ಇನ್ಸಪೆಕ್ಟರ್ ಜ್ಯೋತಿ, ವಕೀಲರಾದ ಕಾರ್ತಿಕೇಯನ್ ,ಪೌಲ್ ಚೆರಿಯನ್ ಇದ್ದರು.