ಉದಯಕುಮಾರ ಅಧ್ಯಕ್ಷರಾಗಿ ನೇಮಕ

| Published : Sep 19 2024, 01:56 AM IST

ಸಾರಾಂಶ

ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಬಾಗಲಕೋಟೆ ತಾಲೂಕು ನೂತನ ಅಧ್ಯಕ್ಷರನ್ನಾಗಿ ಉದಯಕುಮಾರ ಬಾಳಕ್ಕನವರ ಅವರನ್ನು ನೇಮಕ ಮಾಡಲಾಗಿದೆ ಎಂದು ಲೋಕಾಪುರ ಪಟ್ಟಣದ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಬಾಗಲಕೋಟೆ ತಾಲೂಕು ನೂತನ ಅಧ್ಯಕ್ಷರನ್ನಾಗಿ ಉದಯಕುಮಾರ ಬಾಳಕ್ಕನವರ ಅವರನ್ನು ನೇಮಕ ಮಾಡಲಾಗಿದೆ ಎಂದು ಲೋಕಾಪುರ ಪಟ್ಟಣದ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ ತಿಳಿಸಿದರು.

ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ ಮಾತನಾಡಿ, ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ಶೋಷಿತ ಸಮುದಾಯಗಳ ಪರವಾಗಿ ಸಮಾಜ ಸೇವೆ ಮಾಡುವ ಜೊತೆಗೆ ನಾಡು-ನುಡಿ ರಕ್ಷಣೆಯಲ್ಲಿ ಸಕ್ರಿಯವಾಗಿ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಈ ವೇಳೆ ಹಣಮಂತ ದುರ್ಗನ್ನವರ, ಶಂಕರಗೌಡ ಪಾಟೀಲ, ದುರ್ಗಪ್ಪ ಕಾಳಮ್ಮನವರ, ನಿಂಗಪ್ಪ ದಾಸಪ್ಪನವರ, ರವಿ ಬೆನ್ನೂರ, ಸುರೇಶ ಹುಲ್ಲನ್ನವರ, ಹಣಮಂತಗೌಡ ದಾಸಪ್ಪನವರ, ಜಗದೇಶ ಅಂಗಡಿ ಇದ್ದರು.