ಮಣಿಪಾಲದಲ್ಲಿ ಉದ್ಭವ್ ಡಿಸೈನ್ ಸ್ಟುಡಿಯೋ ಕಾರ್ಯಾರಂಭ

| Published : Apr 13 2025, 02:05 AM IST

ಮಣಿಪಾಲದಲ್ಲಿ ಉದ್ಭವ್ ಡಿಸೈನ್ ಸ್ಟುಡಿಯೋ ಕಾರ್ಯಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

1992ರಲ್ಲಿ ಸುಸ್ಥಿರ ವಾಸ್ತುಶಿಲ್ಪದ ಪ್ರವರ್ತನೆಯ ಗುರಿಯೊಂದಿಗೆ ಬೆಂಗಳೂರಿನಲ್ಲಿ ಸ್ಥಾಪನೆಯಾದ ಉದ್ಭವ ಡಿಸೈನ್ ಸ್ಟುಡಿಯೋ ಇದೀಗ ಮಣಿಪಾಲಕ್ಕೆ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ. ಯುವ ಆರ್ಕಿಟೆಕ್ಟ್ ಆರ್. ಆಶ್ಲೇಷ್ ಶೆಟ್ಟಿ ನೇತೃತ್ವದಲ್ಲಿ, ಈ ಸಂಸ್ಥೆ ಪರಿಸರ ಸ್ನೇಹಿ ಮತ್ತು ಸುಸ್ಥಿರ ನಿರ್ಮಾಣಗಳ ಮೇಲೆ ಕೇಂದ್ರೀಕರಿಸಿದ್ದು, ಈಗಾಗಲೇ ವಸತಿ, ಸಾಂಸ್ಥಿಕ, ಆತಿಥ್ಯ ಮತ್ತು ವಾಣಿಜ್ಯ ಯೋಜನೆಗಳನ್ನು ವಿನ್ಯಾಸಗೊಳಿಸುವಲ್ಲಿ ಹೆಸರುವಾಸಿವಾಗಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಅನಂತನಗರದ ಓಷಿಯನ್ ವ್ಯೂ ಕಟ್ಟಡದಲ್ಲಿ ಬೆಂಗಳೂರು ಮೂಲದ ಉದ್ಭವ್ ಡಿಸೈನ್ ಸ್ಟುಡಿಯೋವನ್ನು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ದೇಶದ ಭವಿಷ್ಯ ಯುವ ಜನತೆಯ ಕೈಯಲ್ಲಿದೆ ಎನ್ನುತ್ತಾರೆ. ಅದರಂತೆ ಭವಿಷ್ಯದ ಕಡೆಗೆ ವೇಗದಿಂದ ಅಧುನಿಕವಾಗಿ ಬೆಳೆಯುತ್ತಿರುವ ಉಡುಪಿಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುವ ಯುವ ವಾಸ್ತುತಂತ್ರಜ್ಞರ ಅಗತ್ಯವಿದೆ. ಈ ನಿಟ್ಟಿನಲ್ಲಿ ಉದ್ಭವ್ ಡಿಸೈನ್ ಸ್ಟುಡಿಯೋ ಯಶಸ್ವಿಯಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿಯ ಬೆಲ್ ಓ ಸಿಲ್ ವಾಲ್ವ್‌ ಪ್ರೈ.ಲಿ. ಆಡಳಿತ ನಿರ್ದೇಶಕ ರಾಜೇಶ್ ಸಾಲಿನ್ಸ್, ಮಾಹೆ ಕೆಎಂಸಿಯ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಉಜ್ವಲ ಡೆವೆಲಪರ್ಸ್‌ನ ಪುರುಷೋತ್ತಮ ಶೆಟ್ಟಿ ಅವರು ಸಂಸ್ಥೆಗೆ ಶುಭ ಹಾರೈಸಿದರು.ಸಂಸ್ಥೆಯ ಮುಖ್ಯಸ್ಥ, ಅರ್ಕಿಟೆಕ್ಟ್ ಆಶ್ಲೇಷ್ ಶೆಟ್ಟಿ ಅತಿಥಿಗಳನ್ನು ಬರ ಮಾಡಿಕೊಂಡರು. ಬೆಂಗಳೂರಿನ ಖ್ಯಾತ ಅರ್ಕಿಟೆಕ್ಟ್ ಸುಮಂತ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.ಸುಸ್ಥಿರ ಸೌಂದರ್ಯದ ಗುರಿ:

1992ರಲ್ಲಿ ಸುಸ್ಥಿರ ವಾಸ್ತುಶಿಲ್ಪದ ಪ್ರವರ್ತನೆಯ ಗುರಿಯೊಂದಿಗೆ ಬೆಂಗಳೂರಿನಲ್ಲಿ ಸ್ಥಾಪನೆಯಾದ ಉದ್ಭವ ಡಿಸೈನ್ ಸ್ಟುಡಿಯೋ ಇದೀಗ ಮಣಿಪಾಲಕ್ಕೆ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ. ಯುವ ಆರ್ಕಿಟೆಕ್ಟ್ ಆರ್. ಆಶ್ಲೇಷ್ ಶೆಟ್ಟಿ ನೇತೃತ್ವದಲ್ಲಿ, ಈ ಸಂಸ್ಥೆ ಪರಿಸರ ಸ್ನೇಹಿ ಮತ್ತು ಸುಸ್ಥಿರ ನಿರ್ಮಾಣಗಳ ಮೇಲೆ ಕೇಂದ್ರೀಕರಿಸಿದ್ದು, ಈಗಾಗಲೇ ವಸತಿ, ಸಾಂಸ್ಥಿಕ, ಆತಿಥ್ಯ ಮತ್ತು ವಾಣಿಜ್ಯ ಯೋಜನೆಗಳನ್ನು ವಿನ್ಯಾಸಗೊಳಿಸುವಲ್ಲಿ ಹೆಸರುವಾಸಿವಾಗಿದೆ.ಮೂರು ದಶಕಗಳಿಗೂ ಹೆಚ್ಚು ಕಾಲದ ಪರಂಪರಾಗತ, ಕ್ರಿಯಾತ್ಮಕ ಮತ್ತು ಸೌಂದರ್ಯದ ನಿರ್ಮಾಣಗಳಲ್ಲಿ ಪರಿಣತಿ ಹೊಂದಿರುವ ಸಂಸ್ಥೆ, ಪ್ರಮುಖ ವಾಸ್ತುಶಿಲ್ಪ ಸಂಸ್ಥೆಯಾಗಿ ಖ್ಯಾತಿಯನ್ನು ಗಳಿಸಿದೆ. ಈ ಅನುಭವದೊಂದಿಗೆ ಉದ್ಭವ ಡಿಸೈನ್ ಸ್ಟುಡಿಯೋ ಮಣಿಪಾಲಕ್ಕೆ ನವೀನ ಮತ್ತು ಪರಿಸರ ಪ್ರಜ್ಞೆಯ ವಿನ್ಯಾಸಗಳನ್ನು ತರುವ ಉದ್ದೇಶವಿಟ್ಟುಕೊಂಡಿದೆ ಎಂದು ಸುಮಂತ್ ಶೆಟ್ಟಿ ತಿಳಿಸಿದ್ದಾರೆ.