ಸಾರಾಂಶ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ವತಿಯಿಂದ ವೀರ ರಾಣಿ ಅಬ್ಬಕ್ಕ ಅವರ 500ನೇ ಜನ್ಮ ಜಯಂತ್ಯೋತ್ಸವ ಪ್ರಯುಕ್ತ ನಡೆಯುತ್ತಿರುವ ರಥಯಾತ್ರೆಯನ್ನು ಕೃಷ್ಣಮಠದ ರಥಬೀದಿಯಲ್ಲಿ ಭವ್ಯ ಶೋಭಯಾತ್ರೆಯ ಮೂಲಕ ಸ್ವಾಗತಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ವತಿಯಿಂದ ವೀರ ರಾಣಿ ಅಬ್ಬಕ್ಕ ಅವರ 500ನೇ ಜನ್ಮ ಜಯಂತ್ಯೋತ್ಸವ ಪ್ರಯುಕ್ತ ನಡೆಯುತ್ತಿರುವ ರಥಯಾತ್ರೆಯನ್ನು ಕೃಷ್ಣಮಠದ ರಥಬೀದಿಯಲ್ಲಿ ಭವ್ಯ ಶೋಭಯಾತ್ರೆಯ ಮೂಲಕ ಸ್ವಾಗತಿಸಲಾಯಿತು.ಪೂರ್ಣಪ್ರಜ್ಞ ಕಾಲೇಜಿನಿಂದ ಹೊರಟ ರಥವು ಕವಿ ಮುದ್ದಣ ಮಾರ್ಗವಾಗಿ ರಥಬೀದಿಯನ್ನು ಸೇರಿತು. ಅಲ್ಲಿ ಸಭಾ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಕಿರಿಯಪಟ್ಟದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದ, ವೀರರಾಣಿ ಅಬ್ಬಕ್ಕ ಅವರು ಭಾರತದ ಭವ್ಯ ಇತಿಹಾಸದಲ್ಲಿ ನೀಡಿರುವಂತಹ ಕೊಡುಗೆಗಳನ್ನು ಸ್ಮರಿಸಿದರು ಮತ್ತು ಇಂದಿನ ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದರು.ಈ ಸಂದರ್ಭ ವಿಶೇಷ ಅತಿಥಿಯಾಗಿ ಭರತನಾಟ್ಯ ಕಲಾವಿದೆ, 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ಮಾಡುವುದರ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ವಿದುಷಿ ದೀಕ್ಷಾ ವಿ. ಅವರನ್ನು ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್, ಎಬಿವಿಪಿ ವಿಭಾಗ ಪ್ರಮುಖ ಕೇಶವ ಬಂಗೇರ, ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ ,ಉಡುಪಿ ಜಿಲ್ಲಾ ಪ್ರಮುಖ ರಾಜಶಂಕರ್, ಉಡುಪಿ ತಾಲೂಕು ಸಂಚಾಲಕ್ ಮಾಣಿಕ್ಯ ಭಟ್, ಉಡುಪಿ ನಗರ ಸಂಘಟನಾ ಕಾರ್ಯದರ್ಶಿ ರೋಹಿತ್ ಮತ್ತು ಪ್ರಮುಖರಾದ ಶಿವನ್, ಮನೀಶ್,ವಂಶಿತ್, ಭಾರ್ಗವ್, ಅನುಷಾ, ಸಂಜನಾ, ಪುಷ್ಪ , ವಿನೀತ್, ಧನುಷ್ ಸೇರಿದಂತೆ ಉಪಸ್ಥಿತರಿದ್ದರು.