ಉಡುಪಿ ಅಡ್ವೋಕೇಟ್ಸ್ ವೆಲ್ಫೇರ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ಉಡುಪಿ ವಕೀಲರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ ಜರುಗಿತು.

ಉಡುಪಿ: ಉಡುಪಿ ಅಡ್ವೋಕೇಟ್ಸ್ ವೆಲ್ಫೇರ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ಉಡುಪಿ ವಕೀಲರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ ಜರುಗಿತು.

ಉಡುಪಿ ವಕೀಲರ ಸಂಘಕ್ಕೆ ನ. 21 ರಂದು ನಡೆದ ವಿವಿಧ 27 ಪದಾಧಿಕಾರಿಗಳ ಚುನಾವಣೆಯಲ್ಲಿ ಒಟ್ಟು 26 ಸ್ಥಾನಗಳಿಗೆ ಸ್ಪರ್ಧಿಸಿದ ಕ್ಲಬ್‌ನ ಅಭ್ಯರ್ಥಿಗಳ ಪೈಕಿ, ಜಯಪ್ರಕಾಶ್ ಕೆದ್ಲಾಯ ಎಚ್ ಅವರ ನೇತೃತ್ವದಲ್ಲಿ ಸ್ಪರ್ಧಿಸಿದ 18 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಉಪಾಧ್ಯಕ್ಷರಾಗಿ ದೇವದಾಸ್ ವಿ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಾವಿತ್ರಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಮತ್ತು ಕೆಟಗರಿ 1 ರಲ್ಲಿ ಭರತೀಶ್ ಮತ್ತು ಅಂಬಿಕಾ ಪ್ರಭು, ಕೆಟಗರಿ 2 ರಲ್ಲಿ ಮಂಜುನಾಥ ನಾಗಪ್ಪ ನಾಯ್ಕ, ನಾಗಾರ್ಜುನ, ಶಾರದಾ, ಕೆಟಗರಿ 3 ರಲ್ಲಿ ಗುರುಪ್ರಸಾದ್ ಜಿ.ಎಸ್, ನಾಗರಾಜ ಉಪಾಧ್ಯ ಎಂ, ಕೆಟಗರಿ 4 ರಲ್ಲಿ ಗುರುರಾಜ್ ಜಿ ಎಸ್, ನಾಗರಾಜ ಕಿನ್ನಿಮುಲ್ಕಿ, ಸಂತೋಷ್ ಆಚಾರ್ಯ, ಕವಿತಾ, ಕೆಟಗರಿ 5 ರಲ್ಲಿ ಶ್ರೀಶಾ ಆಚಾರ್, ಗೀತಾ ಕೌಶಿಕ್, ಸಂತೋಷ್ ಹೆಬ್ಬಾರ್ ಜಯ ಗಳಿಸಿದ್ದಾರೆ.ಕಾರ್ಯಕ್ರಮದಲ್ಲಿ ಕ್ಲಬ್‌ನ ಗೌರವಾಧ್ಯಕ್ಷ ಹರೆಮಕ್ಕಿ ರತ್ನಾಕರ ಶೆಟ್ಟಿ, ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿಗಾರ್, ನೂತನ ಅಧ್ಯಕ್ಷ ಜಯಪ್ರಕಾಶ್ ಕೆದ್ಲಾಯ ಎಚ್, ಕಾರ್ಯದರ್ಶಿ ಅಖಿಲ್ ಬಿ. ಹೆಗ್ಡೆ, ಖಜಾಂಚಿ ವೈ.ಟಿ. ರಾಘವೇಂದ್ರ ಹಾಗೂ ಪದಾಧಿಕಾರಿಗಳಾದ ವಾಣಿ ವಿ. ರಾವ್, ಸುಮಿತ್, ಕಿರಣ್ ಎಸ್. ಭಟ್, ಸಂಜಯ್ ಕರ್ಕೇರಾ, ಬಾಲಚಂದ್ರ, ಮಂಜುನಾಥ ನಾಯ್ಕ್ ಮತ್ತಿತರರಿದ್ದರು.