ಸಾರಾಂಶ
ಚಿತ್ತರಂಜನ್ ಸರ್ಕಲ್‌ನ ಸಂತೋಷ ನಿಲಯದ ಗೋಶಾಲೆಗೆ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ತೆರಳಿ ಗೋಪೂಜೆ ನೆರವೇರಿಸಿದರು. ಎಬಿವಿಪಿಯ ಉಡುಪಿ ಜಿಲ್ಲಾ ಪ್ರಮುಖರಾದ ರಾಜಶಂಕರ್, ಭಾರತೀಯ ಜೀವನದಲ್ಲಿ ಗೋವಿನ ಪ್ರಾಮುಖ್ಯತೆಯನ್ನು ತಿಳಿಸಿದರು ಹಾಗೂ ಕಾರ್ಯಕರ್ತರು ಗೋವಿಗೆ ಹೂವು, ಹಣ್ಣನ್ನು ನೀಡಿ ಪೂಜಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಉಡುಪಿ ನಗರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಶನಿವಾರ ಗೋಪೂಜೆ ನಡೆಯಿತು.
ಚಿತ್ತರಂಜನ್ ಸರ್ಕಲ್‌ನ ಸಂತೋಷ ನಿಲಯದ ಗೋಶಾಲೆಗೆ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ತೆರಳಿ ಗೋಪೂಜೆ ನೆರವೇರಿಸಿದರು.ಎಬಿವಿಪಿಯ ಉಡುಪಿ ಜಿಲ್ಲಾ ಪ್ರಮುಖರಾದ ರಾಜಶಂಕರ್, ಭಾರತೀಯ ಜೀವನದಲ್ಲಿ ಗೋವಿನ ಪ್ರಾಮುಖ್ಯತೆಯನ್ನು ತಿಳಿಸಿದರು ಹಾಗೂ ಕಾರ್ಯಕರ್ತರು ಗೋವಿಗೆ ಹೂವು, ಹಣ್ಣನ್ನು ನೀಡಿ ಪೂಜಿಸಿದರು.ಈ ಸಂದರ್ಭ ಹಿರಿಯರಾದ ವಂದನಾ ಪೈ, ಲಕ್ಷ್ಮಣ್ ಕರ್ಕೇರ, ಉಡುಪಿ ನಗರ ಅಧ್ಯಕ್ಷರಾದ ಸದಾನಂದ ಭಟ್, ನಗರ ಸಂಘಟನ ಕಾರ್ಯದರ್ಶಿಯಾದ ರೋಹಿತ್, ನಗರ ಕಾರ್ಯದರ್ಶಿ ಮನೀಶ್ ಕುಂದರ್, ನಗರ ಸಹ ಕಾರ್ಯದರ್ಶಿಗಳಾದ ರಂಜಿತ್, ವಿನೀತ್, ಪುಷ್ಪ, ಸಂಜನಾ, ವಿಭಾಗ ಎಸ್.ಎಫ್.ಡಿ. ಸದಸ್ಯರಾದ ಅನಂತ ಕೃಷ್ಣ, ಪ್ರಾಂತ ಕಾರ್ಯಸಮಿತಿ ಸದಸ್ಯರಾದ ಶ್ರೀವತ್ಸ, ಉಡುಪಿ ಜಿಲ್ಲಾ ಸಂಚಾಲಕರಾದ ಶ್ರೇಯಸ್, ಪ್ರಾಂತ ವಿದ್ಯಾರ್ಥಿನಿ ಪ್ರಮುಖರಾದ ಸಂಹಿತ, ನಗರದ ಎಲ್ಲಾ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.