ಸಾರಾಂಶ
ಟೆಂಡರ್ ವಿರುದ್ಧ ಲೋಕಾಯುಕ್ತಕ್ಕೆ ದೂರು, ಕಾನೂನು ಹೋರಾಟದ ಎಚ್ಚರಿಕೆಕನ್ನಡಪ್ರಭ ವಾರ್ತೆ ಉಡುಪಿಈ ಹಿಂದೆ ಸ್ಮಾರ್ಟ್ ಡಿಜಿಟಲ್ ಸಿಟಿ ಯೋಜನೆಯಡಿ ಉಡುಪಿ ನಗರಸಭೆಗೆ ಆದಾಯ ಬರುವಂತಹ ಡಿಜಿಟಲ್ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಉಡುಪಿ ನಗರಕ್ಕೆ ರೂಪಿಸಲಾಗಿತ್ತು, ಆದರೆ ಅದನ್ನು ಕೈಬಿಟ್ಟು ನಗರಸಭೆಗೆ ಕೋಟ್ಯಾಂತರ ರು. ವೆಚ್ಚವಾಗುವ ವ್ಯವಸ್ಥೆಯನ್ನು ಜಾರಿಗೆ ತರಲು ಟೆಂಡರ್ ಕರೆಯಲಾಗಿದೆ. ಇದನ್ನು ತಕ್ಷಣ ಕೈಬಿಡಬೇಕು, ಇಲ್ಲವಾದಲ್ಲಿ ಈ ಬಗ್ಗೆ ಮೇಲಧಿಕಾರಿಗಳಿಗೆ, ಲೋಕಾಯುಕ್ತಕ್ಕೆ ದೂರು ನೀಡಿ ಕಾನೂನು ಹೋರಾಟ ರೂಪಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರಸಭೆ ಟ್ರಾಫಿಕ್ ಸಿಗ್ನಲ್ ಗಳಿಗೆ ಜನರ ತೆರಿಗೆ ಹಣವನ್ನು ಅನಗತ್ಯ ಪೋಲು ಮಾಡುತ್ತಿದೆ ಎಂದು ಆರೋಪಿಸಿದರು.ಈ ಹಿಂದೆ ತಾವು ಶಾಸಕರಾಗಿದ್ದಾಗ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ತಜ್ಞರೊಂದಿಗೆ ಸಮಾಲೋಚಿಸಿ ವೈಜ್ಞಾನಿಕ ಮತ್ತು ಆಧುನಿಕ ತಂತ್ರಜ್ಞಾನವನ್ನೊಳಗೊಂಡ, ಪಿಪಿಪಿ ಮಾದರಿಯಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಟೆಂಡರ್ ಕರೆದು ಗುತ್ತಿಗೆದಾರರ ನೇಮಕ ಮಾಡಲಾಗಿತ್ತು. ಆದರೆ ಈ ಯೋಜನೆಯನ್ನು ಎರಡೂವರೆ ವರ್ಷ ಕಳೆದರೂ ನಗರಸಭೆ ಕಾರ್ಯರೂಪಕ್ಕೆ ತಾರದೇ, ಅದನ್ನು ರದ್ದೂ ಮಾಡದೇ, ಹೊಸ ಟೆಂಡರೊಂದನ್ನು ಕರೆದಿದ್ದಾರೆ. ಹಿಂದಿನ ಟೆಂಡರ್ ಇನ್ನೂ ಜಾರಿಯಲ್ಲಿರುವಾಗಲೇ, ಅದೇ ಕಾಮಗಾರಿಗೆ ಹೊಸ ಟೆಂಡರ್ ಕರೆದಿರುವುದು ಕಾನೂನುಬಾಹಿರ ಎಂದವರು ಹೇಳಿದರು.ನಗರಸಭೆ ಮಾಜಿ ಸದಸ್ಯ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))