ಉಡುಪಿ: ಝಕಾತ್‌ನಿಂದ ಎರಡು ಅಟೋ ರಿಕ್ಷಾಗಳ ವಿತರಣೆ

| Published : Feb 23 2025, 12:36 AM IST

ಸಾರಾಂಶ

ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಈ ವರ್ಷ ಸಂಗ್ರಹಿಸಿದ ಝಕಾತ್‌ನ 5 ಲಕ್ಷ ರು. ಮೊತ್ತದಲ್ಲಿ ಅರ್ಹ ಫಲಾನುಭವಿಗಳಿಗೆ ಎರಡು ಆಟೋ ರಿಕ್ಷಾಗಳನ್ನು ಶುಕ್ರವಾರ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಈ ವರ್ಷ ಸಂಗ್ರಹಿಸಿದ ಝಕಾತ್‌ನ 5 ಲಕ್ಷ ರು. ಮೊತ್ತದಲ್ಲಿ ಅರ್ಹ ಫಲಾನುಭವಿಗಳಿಗೆ ಎರಡು ಆಟೋ ರಿಕ್ಷಾಗಳನ್ನು ಶುಕ್ರವಾರ ವಿತರಿಸಲಾಯಿತು.

ಉಡುಪಿ ಜಾಮಿಯ ಮಸೀದಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಬಿ.ಕೆ. ಇಕ್ಬಾಲ್ ಅವರು ಮತ್ತು ಜಾಮಿಯ ಮಸೀದಿ ಅಧ್ಯಕ್ಷ ರಿಯಾಝ್ ಅಹಮದ್, ಆಟೋ ರಿಕ್ಷಾಗಳ ಕೀಲಿ ಕೈಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಮುನೀರ್ ಮುಹಮ್ಮದ್ ವಹಿಸಿದ್ದರು. ಮಸೀದಿಯ ಖತೀಬ್ ವೌಲಾನ ರಶೀದ್ ಅಹ್ಮದ್ ನದ್ವಿ, ಝಕಾತ್‌ನ ಪ್ರಾಮುಖ್ಯತೆಯನ್ನು ವಿವರಿಸಿದರು.

ಮಸೀದಿಯ ಕಾರ್ಯದರ್ಶಿ ಖಲೀದ್ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು. ವೆಲ್ಫೇರ್ ಸಂಸ್ಥೆಯ ಕಾರ್ಯದರ್ಶಿ ವಿ. ಎಸ್.ಉಮರ್ ಸ್ವಾಗತಿಸಿದರು. ಇಕ್ಬಾಲ್ ಮನ್ನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.