ಸಾರಾಂಶ
‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಗುರುವಾರ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದಲ್ಲಿ ‘ತಿರಂಗಾ ದ್ವಿಚಕ್ರ ವಾಹನ ಜಾಥಾ’ ನಡೆಯಿತು.
ಉಡುಪಿ: 79ನೇ ಸ್ವಾತಂತ್ರ್ಯ ದಿನಾಚರಣೆಯ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಗುರುವಾರ ಸಂಜೆ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದಲ್ಲಿ ‘ತಿರಂಗಾ ದ್ವಿಚಕ್ರ ವಾಹನ ಜಾಥಾ’ ನಡೆಯಿತು.ನಿಟ್ಟೂರು-ಅಂಬಾಗಿಲು ಜಂಕ್ಷನ್‌ನಲ್ಲಿರುವ ಸಂಘ ನಾಯಕ ದಿ. ಕರಂಬಳ್ಳಿ ಸಂಜೀವ ಶೆಟ್ಟಿ ಅವರ ಪ್ರತಿಮೆಗೆ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಮತ್ತು ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಪುಷ್ಪಾರ್ಚನೆಗೈಯುವ ಮೂಲಕ ‘ತಿರಂಗಾ ದ್ವಿಚಕ್ರ ವಾಹನ ಜಾಥಾ’ಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷೆ ಸುಮಾ ಯು. ಶೆಟ್ಟಿ, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿತಾ ಬಿ. ಶೆಟ್ಟಿ, ಸರೋಜಾ ಶೆಣೈ, ಪ್ರಮುಖರಾದ ಗೀತಾಂಜಲಿ ಎಮ್. ಸುವರ್ಣ, ವೀಣಾ ಎಸ್. ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ಗಿರಿಧರ್ ಆಚಾರ್ಯ, ನಗರಸಭಾ ಸದಸ್ಯರು, ಮಹಿಳಾ ಮೋರ್ಚಾ ಜಿಲ್ಲಾ, ಉಡುಪಿ ನಗರ, ಗ್ರಾಮಾಂತರ ಮತ್ತು ಕಾಪು ಮಂಡಲದ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಮಹಿಳಾ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.‘ತಿರಂಗಾ ದ್ವಿಚಕ್ರ ವಾಹನ ಜಾಥಾ’ ನಿಟ್ಟೂರು-ಅಂಬಾಗಿಲು ಜಂಕ್ಷನ್ ನಿಂದ ಪ್ರಾರಂಭಗೊಂಡು ಕಲ್ಸಂಕ, ಕಡಿಯಾಳಿ, ಶಾರದಾ ಮಂಟಪ ಮಾರ್ಗವಾಗಿ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ಸಮಾಪನಗೊಂಡಿತು.