ವಿದುಷಿ ದೀಕ್ಷಾಗೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಭಿನಂದನೆ

| Published : Sep 13 2025, 02:06 AM IST

ವಿದುಷಿ ದೀಕ್ಷಾಗೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

216 ಗಂಟೆಗಳ ಕಾಲ ನಿರಂತರವಾಗಿ ನೃತ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸೇರಿದ ವಿದುಷಿ ದೀಕ್ಷಾ ವಿ. ಅವರನ್ನು ಗುರುವಾರ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು.

ಉಡುಪಿ: ಸುಮಾರು 216 ಗಂಟೆಗಳ ಕಾಲ ನಿರಂತರವಾಗಿ ನೃತ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸೇರಿದ ವಿದುಷಿ ದೀಕ್ಷಾ ವಿ. ಅವರನ್ನು ಗುರುವಾರ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು.ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಸ್ವಾಗತಿಸಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಳೆ ವಿದುಷಿ ದೀಕ್ಷಾ ಅವರನ್ನು ಸಭೆಗೆ ಪರಿಚಯಿಸಿದರು. ನಂತರ ದೀಕ್ಷಾ ಅವರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಲಾಯಿತು. ದೀಕ್ಷಾ ಅವರ ಪತಿ ರಾಹುಲ್ ಉಪಸ್ಥಿತರಿದ್ದರು. ನಂತರ ಮಾತನಾಡಿದ ದೀಕ್ಷಾ, ನಾನು ಇದನ್ನು ಸಾಧಿಸಲೇ ಬೇಕು ಹಾಗೂ ಸಾಧಿಸಿಯೇ ಸಾಧಿಸುತ್ತೇನೆ ಎನ್ನುವ ದೃಢತೆ, ಆತ್ಮವಿಶ್ವಾಸ ಹಾಗೂ ಛಲ ಬೆಳೆಸಿಕೊಂಡು ಮುಂದಡಿ ಇಟ್ಟಿದ್ದೆ. ಮಾನಸಿಕವಾಗಿ ನಾವು ಗಟ್ಟಿಯಾದರೆ ನಮ್ಮ ಶರೀರವೂ ಅದನ್ನೇ ಅನುಸರಿಸುತ್ತದೆ ಎಂದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಶುಭಾಶಂಸನೆಗೈದರು. ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಕೋಟ ಬ್ಲಾಕ್ ಅಧ್ಯಕ್ಷೆ ರೇಖಾ ಪಿ.ಸುವರ್ಣ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷೆ ಅನಿತಾ ಬಾಬು ಪೂಜಾರಿ, ಮಾಜಿ ಜಿಪಂ ಸದಸ್ಯರಾದ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಗೋಪಿ ಕೆ.ನಾಯ್ಕ್, ಕಾಪು ಬ್ಲಾಕ್ ಕಾಂಗ್ರೆಸ್ ನ ಆಶಾ ಆಂಚನ್, ನಾಗೇಶ್ ಕುಮಾರ್ ಉದ್ಯಾವರ, ಬಾಲಕೃಷ್ಣ ಪೂಜಾರಿ, ಸಂಜಯ್ ಆಚಾರ್ಯ, ಆಶಾ ಚಂದ್ರಶೇಖರ್, ಚಂದ್ರಿಕಾ ಶೆಟ್ಟಿ, ಸರಸ್ವತಿ ಉದ್ಯಾವರ, ಹೆಲೆನ್ ಫೆರ್ನಾಂಡಿಸ್, ಸುಗಂಧಿ ಶೇಖರ್, ಜ್ಯೋತಿ, ಮೀನಾಕ್ಷಿ ಮಾಧವ, ಸಂಧ್ಯಾ ತಿಲಕ್ ರಾಜ್, ಪುಷ್ಪಾ ಆಂಚನ್, ಶೋಭಾ ಬೇಕಲ್, ಸುಂದರಿ, ರಮಾದೇವಿ, ಸುರೇಂದ್ರ ಆಚಾರ್ಯ, ಸುಮನಾ ಮುಂತಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಚಂದ್ರಿಕಾ ಶೆಟ್ಟಿ ವಂದಿಸಿದರು.