ಸೆ.22ರಿಂದ ಉಡುಪಿ ದಸರೆ: ಭಿತ್ತಪತ್ರ ಅನಾವರಣ

| Published : Jul 23 2025, 12:31 AM IST

ಸಾರಾಂಶ

ಉಡುಪಿಯ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ 10ನೇ ವರ್ಷದ ಉಡುಪಿ ದಸರೆ ಪ್ರಚಾರದ ಭಿತ್ತಿಪತ್ರವನ್ನು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗೀತಾ ಮಂದಿರದಲ್ಲಿ ಬಿಡುಗಡೆ ಮಾಡಿ ಆನುಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ 10ನೇ ವರ್ಷದ ಉಡುಪಿ ದಸರೆ ಸೆ. 22ರಿಂದ ಅ. 3ರವರೆಗೆ ಪರ್ಯಾಯ ಪುತ್ತಿಗೆ ಮಠದ ಸಹಯೋಗದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ಅತ್ಯಂತ ವೈಭವದಿಂದ ನಡೆಯಲಿದ್ದು, ಇದರ ಪ್ರಚಾರದ ಭಿತ್ತಿಪತ್ರವನ್ನು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗೀತಾ ಮಂದಿರದಲ್ಲಿ ಬಿಡುಗಡೆ ಮಾಡಿ ಆನುಗ್ರಹಿಸಿದರು.ಈ ಸಂದರ್ಭ ಶಾರದೋತ್ಸವ ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು, ಈ ದಶಮ ವರುಷದ ಭವ್ಯವಾದ ಶಾರದಾಮೂರ್ತಿಯ ಪ್ರತಿಷ್ಠೆ ಹಾಗೂ ಪೂಜಾನುಷ್ಠಾನಗಳ ಅತ್ಯಂತ ವ್ಯವಸ್ಥಿತವಾಗಿ ಮತ್ತು ವೈಭವಯುತವಾಗಿ ನಡೆಸುವ ಉದ್ದೇಶದಿಂದ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. 11 ದಿನಗಳ ಕಾಲ ಜರುಗಲಿರುವ ಶಾರದಾ ಮಹೋತ್ಸವದಲ್ಲಿ 11 ದಿನವೂ ಕೂಡ ವೈವಿಧ್ಯಮಯ ಸಾಂಸ್ಕೃತಿಕ, ಧಾರ್ಮಿಕ ಕಾರ್ಯ, ಸಭಾ ಕಾರ್ಯಕ್ರಮ ಗಳು ನಡೆಯಲಿವೆ. ರಾಜ್ಯದ ವಿವಿಧ ಹೆಸರಾಂತ ಕಲಾತಂಡಗಳು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ. ಶಾಲಾ ಕಾಲೇಜು ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ ಎಂದು ವಿವರಗಳನ್ನು ನೀಡಿದರು.ಪರ್ಯಾಯ ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಮಠದ ಸಾಂಸ್ಕೃತಿಕ ಸಮಿತಿಯ ರಮೇಶ್ ಭಟ್, ಶಾರದೋತ್ಸವ ಪ್ರಧಾನ ಅರ್ಚಕ ದಾಮೋದರ್ ಭಟ್, ವಿಗ್ರಹ ರಚನಾಕಾರ ಶಿವಮೊಗ್ಗದ ಕುಬೇರ, ಸಮಿತಿಯ ಪ್ರಮುಖರಾದ ಮಟ್ಟು ಲಕ್ಷ್ಮಿನಾರಾಯಣ ರಾವ್, ಜೀ. ವಿ.ಆಚಾರ್ಯ, ರಾಧಾಕೃಷ್ಣ ಮೆಂಡನ್, ತಾರಾ ಉಮೇಶ್ ಆಚಾರ್ಯ, ವೀಣಾ ಎಸ್. ಶೆಟ್ಟಿ, ಸತೀಶ್ ಕುಮಾರ್, ಜಯರಾಮ್ ದೇವಾಡಿಗ, ಸುರೇಶ್ ಸೇರಿಗಾರ್, ದೀಪಕ್ ಶೇಟ್, ಜಯರಾಂ ಜಿ., ಸಂತೋಷ್ ಜತ್ತನ್, ಸುಕನ್ಯಾ ಶೇಖರ್, ಸುಜಾತಾ ದೇವಾಡಿಗ, ಸರೋಜಾ ಶೆಣೈ, ಸರೋಜಾ ಯಶವಂತ್, ಭಾರತೀ ಎಸ್, ಶೆಟ್ಟಿ, ಪ್ರಭಾವತಿ ಅಲೆವೂರು, ರೂಪಶ್ರೀ, ತಾರಾ ಸತೀಶ್ ಮತ್ತಿತರರು ಪಾಲ್ಗೊಂಡಿದ್ದರು.