ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ವೀರಭದ್ರಯ್ಯ ಅವರು ಉಡುಪಿ ಕರಾವಳಿ ಶಾಖೆಗೆ ಭೇಟಿ ನೀಡಿದರು. ಅವರ ಜೊತೆಗೆ ರಾಜ್ಯ ಉಪಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ವಿಭಾಗೀಯ ಸಂಯೋಜಕ ಡಾ. ಜಿ. ಕೆ. ಭಟ್, ಸಹಾಯಕ ಕಾರ್ಯದರ್ಶಿ ಡಾ.ಮಹೇಶ್, ಉಡುಪಿ ಜಿಲ್ಲೆಯ ಸಂಯೋಜಕ ಡಾ. ಉಮೇಶ್ ಪುತ್ರನ್ ಮತ್ತು ಉಡುಪಿ ಕರಾವಳಿ ಶಾಖೆಯ ಉಪಾಧ್ಯಕ್ಷ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ವಿಜಯ ವೈ. ಬಿ. ಉಪಸ್ಥಿತರಿದ್ದರು.
ಉಡುಪಿ: ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ವೀರಭದ್ರಯ್ಯ ಅವರು ಉಡುಪಿ ಕರಾವಳಿ ಶಾಖೆಗೆ ಭೇಟಿ ನೀಡಿದರು. ಅವರ ಜೊತೆಗೆ ರಾಜ್ಯ ಉಪಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ವಿಭಾಗೀಯ ಸಂಯೋಜಕ ಡಾ. ಜಿ. ಕೆ. ಭಟ್, ಸಹಾಯಕ ಕಾರ್ಯದರ್ಶಿ ಡಾ.ಮಹೇಶ್, ಉಡುಪಿ ಜಿಲ್ಲೆಯ ಸಂಯೋಜಕ ಡಾ. ಉಮೇಶ್ ಪುತ್ರನ್ ಮತ್ತು ಉಡುಪಿ ಕರಾವಳಿ ಶಾಖೆಯ ಉಪಾಧ್ಯಕ್ಷ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ವಿಜಯ ವೈ. ಬಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ವೀರಭದ್ರಯ್ಯ ಅವರು ನಗದ ಬ್ರಹ್ಮಗಿರಿಯ ಐಎಂಎ ಭವನದಲ್ಲಿ, ವೈದ್ಯರ ಬೇಡಿಕೆ, ಸರಕಾರದ ಸ್ಪಂದನೆಗಳ ಬಗ್ಗೆ ಮಾತನಾಡಿದರು, ಹೊಸ ವೈದ್ಯರು ಭಾರತೀಯ ವೈದ್ಯಕೀಯ ಸಂಘದ ಸದಸ್ಯತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವಂತೆ ಕರೆ ನೀಡಿದರು. ಡಾ.ಅಣ್ಣಯ್ಯ ಕುಲಾಲ್ ಮತ್ತು ಡಾ. ಜಿ. ಕೆ. ಭಟ್ ಅವರು ಮಾತನಾಡಿ ಸಂಘಕ್ಕಾಗಿ ಶ್ರಮಿಸುತ್ತಿರುವ ಸದಸ್ಯರನ್ನು ಶ್ಲಾಘಿಸಿದರು. ಶಾಖೆಯ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಸ್ವಾಗತ ಭಾಷಣ ಮಾಡಿದರು, ಕಾರ್ಯದರ್ಶಿ ಡಾ. ಮಾನಸ್ ಇ. ಆರ್. ನಿರೂಪಿಸಿದರು. ಕೋಶಾಧಿಕಾರಿ ಡಾ. ಸನತ್ ರಾವ್ ವಂದಿಸಿದರು.