ಸಾರಾಂಶ
ಉಡುಪಿಯ ಎಂಜಿಎಂ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ದಿನದ ಹಿಂದಿ ಶೈಕ್ಷಣಿಕ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ಅನಂತರಾಮ್ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಹಿಂದಿ ಉಪನ್ಯಾಸಕರ ಸಂಘದ ವತಿಯಿಂದ ಉಡುಪಿಯ ಎಂಜಿಎಂ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ದಿನದ ಹಿಂದಿ ಶೈಕ್ಷಣಿಕ ಕಾರ್ಯಾಗಾರ ನಡೆಯಿತು. ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಕಾರ್ಯಾಗಾರವನ್ನು ಉದ್ಘಾಟಿಸಿದರು.ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಅನಂತರಾಮ್ ಮಾಹಿತಿ ನೀಡಿದರು. ಈ ಶೈಕ್ಷಣಿಕ ಸಾಲಿನ ಸಂಘದ ಅಧ್ಯಕ್ಷರಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ನಾರಾಯಣ ಈ. ನಾಯ್ಕ್, ಕಾರ್ಯದರ್ಶಿಯಾಗಿ ಮದನ್ ಲಾಲ್ ಜಿ. ಮತ್ತು ಖಜಾಂಜಿಯಾಗಿ ದತ್ತಾನಂದ ಆಯ್ಕೆಯಾದರು. ಈ ಸಂದರ್ಭದಲ್ಲಿ ಮುಂದಿನ ತಿಂಗಳು ನಿವೃತ್ತಿ ಹೊಂದಲಿರುವ ಉಪನ್ಯಾಸಕ ದಿಲೀಪ್ ಬನ್ಸವಾಡೆ ಅವರನ್ನು ಸನ್ಮಾನಿಸಲಾಯಿತು. ಸಂಘದಯ ನಿಕಟ ಪೂರ್ವ ಅಧ್ಯಕ್ಷೆ ಯಶೋಧ ಆರ್., ಖಜಾಂಚಿ ವಿಜಯಲಕ್ಷ್ಮಿ ಮತ್ತು ಕಾರ್ಯದರ್ಶಿ ರೇಷ್ಮಾ ಹಾಗೂ ಉಪನ್ಯಾಸಕಿ ಕಲ್ಪನಾ ಉಪಸ್ಥಿತರಿದ್ದರು. ಅನಂತ ಪದ್ಮನಾಭ ಸ್ವಾಗತಿಸಿದರು. ನೀತಾ ನಿರೂಪಿಸಿದರು. ಸುಖಿತಾ ವಂದಿಸಿದರು.