ಉಡುಪಿ: ಕೋಟ್ಯಾಂತರ ರು. ಮೌಲ್ಯದ ಅಕ್ರಮ ಪಟಾಕಿ ದಾಸ್ತಾನು ಪತ್ತೆ

| Published : Oct 17 2025, 01:03 AM IST

ಉಡುಪಿ: ಕೋಟ್ಯಾಂತರ ರು. ಮೌಲ್ಯದ ಅಕ್ರಮ ಪಟಾಕಿ ದಾಸ್ತಾನು ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು, ಕೋಟದ ಕುಂಜಾಲು ಮತ್ತು ಕುಂದಾಪುರದ ತೆಕ್ಕಟ್ಟೆ ಎಂಬಲ್ಲಿ ಸಂಗ್ರಹಿಸಲಾಗಿದ್ದ ಕೋಟ್ಯಾಂತರ ರು. ಮೌಲ್ಯದ ಅಕ್ರಮ ಪಟಾಕಿ ದಾಸ್ತಾನನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿದ್ದಾರೆ.

ಉಡುಪಿ: ಉಡುಪಿ ಪೊಲೀಸರು ಜಿಲ್ಲೆಯ 3 ಕಡೆಗಳಲ್ಲಿ ದಾಳಿ ನಡೆಸಿ ಕೋಟ್ಯಾಂತರ ರು. ಮೌಲ್ಯದ ಅಕ್ರಮ ಪಟಾಕಿ ದಾಸ್ತಾನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ದೀಪಾವಳಿ ಹಬ್ಬದ ಸಂದರ್ಭ ಮಾರಾಟಕ್ಕೆಂದು, ಯಾವುದೇ ಅನುಮತಿ ಇಲ್ಲದೇ ಅಪಾಯಕಾರಿ ರೀತಿಯಲ್ಲಿ ಕಾರ್ಕಳ ತಾಲೂಕಿನ ಮಿಯಾರು, ಕೋಟದ ಕುಂಜಾಲು ಮತ್ತು ಕುಂದಾಪುರದ ತೆಕ್ಕಟ್ಟೆ ಎಂಬಲ್ಲಿ ಈ ಪಟಾಕಿಗಳನ್ನು ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆಯಾ ಠಾಣಾ ಪೊಲೀಸರು ಈ ದಾಳಿ ನಡೆಸಿದ್ದರು.ಕಾರ್ಕಳದ ಮಿಯಾರು ಗ್ರಾಮದ ಸತ್ಯೇಂದ್ರ ನಾಯಕ್, ರಮಾನಂದ ನಾಯಕ್ ಮತ್ತು ಶ್ರೀಕಾಂತ್ ನಾಯಕ್ ಅವರ ಮನೆಯಲ್ಲಿ ಸುಮಾರು 1 ಕೋಟಿ ರು.ಗೂ ಮಿಕ್ಕಿದ ಅಪಾರ ಪ್ರಮಾಣದ ಅಕ್ರಮ ಪಟಾಕಿ ದಾಸ್ತಾನು ಪತ್ತೆಯಾಗಿದೆ.ತೆಕ್ಕಟ್ಟೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿಯ ಶೆಡ್‌ನಲ್ಲಿ ಪ್ರಶಾಂತ್ ಜೋಗಿ ಎಂಬವರು ತಮ್ಮ ಮನೆಯ ಶೆಡ್‌ನಲ್ಲಿ 1.61 ಲಕ್ಷ ರು., ಕುಂಜಾಲುವಿನಲ್ಲಿ ಶಿವಾನಂದ ರಾವ್ ಎಂಬವರ ಮನೆಯಲ್ಲಿ 35 ಸಾವಿರ ರು. ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ 5 ಮಂದಿ ಆರೋಪಿಗಳ ಮೇಲೆ ಸ್ಪೋಟಕ ವಸ್ತುಗಳ ಕಾಯ್ದೆಯಡಿಆಯಾ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.