ಉಡುಪಿ: ರಿಫಾ ಚೇಂಬರ್‌ ಆಫ್‌ ಕಾಮರ್ಸ್ ಆ್ಯಂಡ್‌ ಇಂಡಸ್ಟ್ರಿ ಘಟಕ ಉದ್ಘಾಟನೆ

| Published : Dec 16 2024, 12:45 AM IST

ಉಡುಪಿ: ರಿಫಾ ಚೇಂಬರ್‌ ಆಫ್‌ ಕಾಮರ್ಸ್ ಆ್ಯಂಡ್‌ ಇಂಡಸ್ಟ್ರಿ ಘಟಕ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ಉಡುಪಿಯ ಮಣಿಪಾಲ್ ಇನ್ ಸಂಭಾಂಗಣದಲ್ಲಿ ರಿಫಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಉಡುಪಿ ಘಟಕದ ಉದ್ಘಾಟನೆ ಸಮಾರಂಭ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ದೂರದೃಷ್ಟಿ ಇಟ್ಟು ವ್ಯಾಪಾರ ವ್ಯವಹಾರ ಮಾಡಿದರೆ ಮಾತ್ರ ಯಶಸ್ಸು ಸಾಧಿಸಬಹುದು ಎಂದು ರಿಫಾ ಚೇಂಬರ್ ಆಫ್ ಕಾಮರ್ಸ್ ರಾಜ್ಯಾಧ್ಯಕ್ಷ ಸಯ್ಯದ್ ಮುಮ್ತಾಜ್ ಮನ್ಸೂರಿ ಹೇಳಿದ್ದಾರೆ.

ಶುಕ್ರವಾರ ಉಡುಪಿಯ ಮಣಿಪಾಲ್ ಇನ್ ಸಂಭಾಂಗಣದಲ್ಲಿ ರಿಫಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಉಡುಪಿ ಘಟಕದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ನಾವು ಮಾಡುವ ವ್ಯಾಪಾರದಲ್ಲಿ ದೂರದೃಷ್ಟಿ ಇರಬೇಕು. ನಾವು ಕೇವಲ ಈಗಿನದ್ದು ಮಾತ್ರ ಯೋಚಿಸುತ್ತೇವೆ. ನಮಗೆ ಒಂದು ಹೊತ್ತಿನ ಊಟ ಸಿಕ್ಕರೆ ಅಷ್ಟೇ ಸಾಕು, ಎಲ್ಲವೂ ಸಿಕ್ಕಿದ ಹಾಗೇ ಎಂದೆನೆಸಿಕೊಳ್ಳುತ್ತೇವೆ, ಮಗಳಿಗೆ ಒಂದು ಎಂಬಿಬಿಎಸ್ ಸೀಟು ಸಿಕ್ಕಿದರೆ ಎಲ್ಲವೂ ಸಿಕ್ಕಿದ ಹಾಗೇ ಎಂದೆನೆಸಿಕೊಳ್ಳುತ್ತೇವೆ, ಆದರೆ ನಮಗೆ ಯಾವುದೇ ರೀತಿಯ ದೂರದೃಷ್ಟಿ ಇರುವುದಿಲ್ಲ. ದೂರ ದೃಷ್ಟಿ ಇಟ್ಟು ವ್ಯಾಪಾರ ವ್ಯವಹಾರ ಮಾಡಿದರೆ ಮಾತ್ರ ಯಶಸ್ಸು ಸಾಧಿಸಬಹುದು ಎಂದು ಮುಮ್ತಾಜ್ ಮನ್ಸೂರಿ ಹೇಳಿದರು.

ರಿಫಾ ಚೇಂಬರ್ ಆಫ್ ಕಾಮರ್ಸ್ ವ್ಯಾಪಾರಿಗಳನ್ನು ಒಂದೆಡೆ ಸೇರಿಸುತ್ತದೆ. ನಮ್ಮಲ್ಲಿರುವ ವ್ಯಾಪಾರ ವಹಿವಾಟುಗಳನ್ನು ಪರಸ್ಪರ ಪರಿಚಯ ಪಟ್ಟುಕೊಳ್ಳುವುದರ ಜೊತೆಗೆ ಸಂಬಂಧಗಳನ್ನು ಸಹ ಸದೃಢಗೊಳಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ರಿಫಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ರಾಜ್ಯ ಜೊತೆ ಕಾರ್ಯದರ್ಶಿ ಮಹಮ್ಮದ್ ಆರೀಫುಲ್ಲಾ, ಸಂಪರ್ಕ ಕಾರ್ಯದರ್ಶಿ ಸಯ್ಯದ್ ಝುಬೇರ್, ಮಾಧ್ಯಮ ಕಾರ್ಯದರ್ಶಿ ಮತೀನ್ ಅಹಮದ್, ಫಯಾಝ್ ಹಮೀದುಲ್ಲಾ, ಉಡುಪಿ‌ ಉದ್ಯಮಿ ಆಸಿಫ್ ಇಕ್ಬಾಲ್ ವೇದಿಕೆಯಲ್ಲಿ ಇದ್ದರು. ಫೈಝ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು, ಆಸಿಪ್ ಜಿಡಿ ಧನ್ಯವಾದವಿತ್ತರು.