ಸುಮಾರು ೨೦೦ ಉದ್ಯೋಗಾಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾದರು. ವಿವಿಧ ಹಂತಗಳಲ್ಲಿ ಸಂದರ್ಶನ ನಡೆದು ಮುಂದಿನ ಹಂತಕ್ಕೆ ಆಯ್ಕೆಯಾದವರನ್ನು ಕಂಪನಿಯ ಮಂಗಳೂರು ಘಟಕಕ್ಕೆ ನೇಮಿಸಿಕೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಉಡುಪಿ

ಮಂಗಳೂರಿನ ಬಹುರಾಷ್ಟ್ರೀಯ ಕಂಪನಿ ಗ್ಲೋಟಸ್‌ ವತಿಯಿಂದ ಇಲ್ಲಿನ ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಿತು.ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್‌ ಆಳ್ವ, ಉದ್ಯೋಗಾಕಾಂಕ್ಷಿಗಳು ಉದ್ಯೋಗ ಪಡೆದುಕೊಳ್ಳುವ ಸಲುವಾಗಿ ಬೇಕಾಗುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದ್ದು, ವಿದ್ಯಾರ್ಥಿ ನೆಲೆಯಲ್ಲೇ ಇವುಗಳನ್ನು ರೂಢಿಸಿಕೊಳ್ಳುವುದು ಅವಶ್ಯಕ ಎಂದು ಪ್ರತಿಪಾದಿಸಿದರು.ಗ್ಲೋಟಸ್‌ ಬಹುರಾಷ್ಟ್ರೀಯ ಕಂಪನಿಯ ಸುರೇಶ್‌ ಮಾತನಾಡಿ, ತಮ್ಮ ಸಂಸ್ಥೆಯ ಪರಿಚಯ ನೀಡಿದರು. ಮಿಲಾಗ್ರಿಸ್‌ ಕಾಲೇಜಿನ ಉಪಪ್ರಾಂಶುಪಾಲರಾದ ಸೋಫಿಯಾ ಡಾಯಸ್‌, ಕಾಮರ್ಸ್‌ ವಿಭಾಗದ ಮುಖ್ಯಸ್ಥೆ ಶಾಲೆಟ್‌ ಮಥಾಯಸ್‌, ರಾಧಿಕಾ ಪಾಟ್ಕರ್‌ ಉಪಸ್ಥಿತರಿದ್ದರು.ಸುಮಾರು ೨೦೦ ಉದ್ಯೋಗಾಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾದರು. ವಿವಿಧ ಹಂತಗಳಲ್ಲಿ ಸಂದರ್ಶನ ನಡೆದು ಮುಂದಿನ ಹಂತಕ್ಕೆ ಆಯ್ಕೆಯಾದವರನ್ನು ಕಂಪನಿಯ ಮಂಗಳೂರು ಘಟಕಕ್ಕೆ ನೇಮಿಸಿಕೊಳ್ಳಲಾಗುವುದು.