ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರ ತಾಲೂಕು ಆಫೀಸು ಶಾಸಕರ ಕಚೇರಿ ಬಳಿ ಮೂಡೆ ಹಾಲು ವಿತರಣಾ ಸಮಾರಂಭ ಶನಿವಾರ ನಡೆಯಿತು.
ಉಡುಪಿ : ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರ ತಾಲೂಕು ಆಫೀಸು ಶಾಸಕರ ಕಚೇರಿ ಬಳಿ ಮೂಡೆ ಹಾಲು ವಿತರಣಾ ಸಮಾರಂಭ ಶನಿವಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿಈಶ್ವರ ಗುರೂಜಿ ಅವರು, ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ದೇಶವಿದೇಶದಿಂದ ಬಹಳಷ್ಟು ಭಕ್ತರು ಉಡುಪಿಗೆ ಬರುತ್ತಾರೆ, ಅವರಿಗೆ ಶ್ರೀ ಕೃಷ್ಣ ಪ್ರಿಯವಾದ ಮೂಡೆ ಹಾಲು ಪ್ರಸಾದ ರೂಪದಲ್ಲಿ ವಿತರಿಸಿ ಅಷ್ಟಮಿಯ ಹಬ್ಬವನ್ನು ಸ್ಮರಣೀಯಗೊಳಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟಿಗಳಾದ ಗೀತಾಂಜಲಿ ಸುವರ್ಣ, ವೀಣಾ ಎಸ್. ಶೆಟ್ಟಿ, ಸತೀಶ್ ದೇವಾಡಿಗ, ರೇಷ್ಮಾ ಸಂತೋಷ ಹೆಗ್ಡೆ, ವಾರಿಜ ಕಲ್ಮಾಡಿ, ಮಾಜಿ ನಗರಸಭಾ ಸದಸ್ಯ ವಿಜಯ್ ಕೊಡವೂರು, ಭಕ್ತರಾದ ಗಜೇಂದ್ರ ಬೈಂದೂರು, ನಾಗರಾಜ್, ಶ್ರೀಧರ್ ಅಮೀನ್, ರಾಜೇಶ್ ಇನ್ನಂಜೆ, ಶಿಲ್ಪಾ ಮಹೇಶ್ ಜತ್ತನ್, ಸಂತೋಷ್ ಕಕ್ಕುಂಜೆ ಕ್ಷೇತ್ರದ ಭಕ್ತರು ಮತ್ತು ಗುರೂಜಿಯವರ ಶಿಷ್ಯರು ಮುಂತಾದವರು ಉಪಸ್ಥಿತರಿದ್ದರು. ರಾಫವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.