ಸಾರಾಂಶ
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರು ಸಂಕಲ್ಪಿಸಿರುವ ಬೃಹತ್ ಗೀತೋತ್ಸವದ ಪ್ರಯುಕ್ತ ನ. 28 ಮತ್ತು 30ರಂದು ಲಕ್ಷ ಕಂಠ ಗೀತಾ ಪಾರಾಯಣ ಮತ್ತು ಭಜನೋತ್ಸವ ನಡೆಯಲಿದೆ. ಈ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ತು, ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ, ಭಜನಾ ಮಂಡಳಿಗಳ ಪದಾಧಿಕಾರಿಗಳ ಸಮಾಲೋಚನಾ ಸಭೆ ರಾಜಾಂಗಣದಲ್ಲಿ ನಡೆಯಿತು.
ಉಡುಪಿ, ಕುಂದಾಪುರ, ಹೆಬ್ರಿ, ಕಾರ್ಕಳ, ಭಟ್ಕಳ, ಬೈಂದೂರು, ಹೊಸನಗರ, ತೀರ್ಥಹಳ್ಳಿ, ಕಾಪು ವಲಯಗಳ ಸುಮಾರು 200 ಕ್ಕೂ ಹೆಚ್ಚು ಪದಾಧಿಕಾರಿಗಳು ಮತ್ತು ಭಜನಾ ಮಂಡಳಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.ಆಶೀರ್ವಚನ ನೀಡಿದ ಪುತ್ತಿಗೆ ಶ್ರೀಪಾದರು, ಉಡುಪಿ ಹಾಗೂ ಧರ್ಮಸ್ಥಳ ಕ್ಷೇತ್ರದ ಅವಿನಾಭಾವ ಸಂಬಂಧವನ್ನು ಉಲ್ಲೇಖಿಸಿ, ಧರ್ಮಸ್ಥಳ ಕ್ಷೇತ್ರದ ಎಲ್ಲಾ ಸಂಘಟನೆಗಳು ಸಕ್ರಿಯವಾಗಿ ಈ ಗೀತೋತ್ಸವದಲ್ಲಿ ಭಾಗವಹಿಸುವುದರೊಂದಿಗೆ, ಉಡುಪಿ-ಧರ್ಮಸ್ಥಳೋತ್ಸವವಾಗಿ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀಮಠದ ದಿವಾನ ಶ್ರೀ ನಾಗರಾಜ ಆಚಾರ್ಯ ಕಾರ್ಯಕ್ರಮಗಳ ಕುರಿತಾದ ಸಂಪೂರ್ಣ ಮಾಹಿತಿ ನೀಡಿದರು. ಧರ್ಮಸ್ಥಳ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ದೊಡ್ಡ ಸಂಖ್ಯೆಯಲ್ಲಿ ಧರ್ಮಸ್ಥಳದ ಸಂಘಟನೆಗಳ ಭಾಗವಹಿಸುವಿಕೆಯ ಬಗ್ಗೆ ವಲಯ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಸಿದ್ಧಪಡಿಸುವ ಭರವಸೆ ನೀಡಿದರು. ಬೃಹತ್ ಗೀತೋತ್ಸವ ಸಮಿತಿ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ, ಭಜನಾ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಗ್ರಾಮಾಭಿವೃದ್ಧಿಯ ಆನಂದ ಸುವರ್ಣ, ನಾಗರಾಜ್ ಶೆಟ್ಟಿ, ಗೀತಾ ತರಬೇತುದಾರರಾದ ಉಷಾ ಹೆಬ್ಬಾರ್, ಶ್ರೀಮಠದ ಪ್ರಮೋದ್ ಸಾಗರ್, ರವೀಂದ್ರಾಚಾರ್ಯ ರಮೇಶ್ ಭಟ್ ಉಪಸ್ಥಿತರಿದ್ದರು. ವಿಕ್ರಮ್ ಕುಂಟಾರ್ ಸ್ವಾಗತಿಸಿದರು, ಕೆ. ವಿ. ರಮಣ್ ವಂದಿಸಿದರು.
;Resize=(128,128))
;Resize=(128,128))