ಉತ್ಥಾನ ದ್ವಾದಶೀ ಪರ್ವಕಾಲದಲ್ಲಿ ಶನಿವಾರ ಉಡುಪಿ ಶ್ರೀಕೃಷ್ಣ ಮಠ ಮತ್ತು ರಥಬೀದಿಯಲ್ಲಿ ವೈಭವದ ಲಕ್ಷದೀಪೋತ್ಸವ ಮತ್ತು ಆ ಪ್ರಯುಕ್ತ ರಥೋತ್ಸವ ನಡೆಯಿತು.
ಉಡುಪಿ: ಉತ್ಥಾನ ದ್ವಾದಶೀ ಪರ್ವಕಾಲದಲ್ಲಿ ಶನಿವಾರ ಉಡುಪಿ ಶ್ರೀಕೃಷ್ಣ ಮಠ ಮತ್ತು ರಥಬೀದಿಯಲ್ಲಿ ವೈಭವದ ಲಕ್ಷದೀಪೋತ್ಸವ ಮತ್ತು ಆ ಪ್ರಯುಕ್ತ ರಥೋತ್ಸವ ನಡೆಯಿತು.
ಇದಕ್ಕೆ ಮೊದಲು ಮಧ್ವ ಸರೋವರದಲ್ಲಿ ಕ್ಷೀರಾಬ್ದಿ ಪೂಜೆ ನಡೆಯಿತು. ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನತೀರ್ಥರು ತಮ್ಮ ಪಟ್ಟದ ದೇವರಿಗೆ, ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಹಾಗೂ ಶ್ರೀ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರು ತಮ್ಮ ಪಟ್ಟದ ದೇವರಿಗೆ ಕ್ಷೀರಾಬ್ದಿ ಪೂಜೆ ಸಲ್ಲಿಸಿದರು. ನಂತರ ಪ್ರಾರ್ಥನೆ ಹಾಗೂ ನವಗ್ರಹ ದಾನ ನಡೆಯಿತು. ಬಳಿಕ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ಹಾಗೂ ರಥಬೀದಿಯಲ್ಲಿ ಲಕ್ಷ ದೀಪೋತ್ಸವ - ರಥೋತ್ಸವ ವೈಭವದಿಂದ ನಡೆಯಿತು. ಇದರಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಧ್ವಸರೋವರ ಮತ್ತು ಪರಿಸರವನ್ನು ವಿಶೇಷವಾಗಿ ದೀಪಾಲಂಕಾರಗೊಳಿಸಲಾಗಿತ್ತು. ಶನಿವಾರದಿಂದ ರಥಬೀದಿಯಲ್ಲಿ ನಿತ್ಯ ರಥೋತ್ಸವಗಳುನಡೆಯುತ್ತವೆ.