ಉಡುಪಿ: ಜನವರಿ 18ರಂದು ಶ್ರೀ ಕೃಷ್ಣ ಮಠದಲ್ಲಿ ಶಿರೂರು ಮಠದ ದ್ವೈವಾರ್ಷಿಕ ಪರ್ಯಾಯ ಮಹೋತ್ಸವಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಸಂಪ್ರದಾಯದಂತೆ 2 ವರ್ಷಗಳ ಕಾಲ ಕೃಷ್ಣ ಪೂಜೆ ಮತ್ತು ಅನ್ನಪ್ರಸಾದ ವಿತರಣೆಗೆ ನಾಲ್ಕು ಮುಹೂರ್ತಗಳು ನಡೆಯುತ್ತವೆ. ಪರ್ಯಾಯೋತ್ಸವಕ್ಕೆ ಕೃಷ್ಣಮಠದ ಪರಿಸರದಲ್ಲಿ ವಿಶಾಲವಾದ ಚಪ್ಪರ ಹಾಕುವ ಕಾರ್ಯಕ್ಕೂ ಮುಹೂರ್ತ ನಡೆಯುತ್ತದೆ.
ಉಡುಪಿ: ಜನವರಿ 18ರಂದು ಶ್ರೀ ಕೃಷ್ಣ ಮಠದಲ್ಲಿ ಶಿರೂರು ಮಠದ ದ್ವೈವಾರ್ಷಿಕ ಪರ್ಯಾಯ ಮಹೋತ್ಸವಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಸಂಪ್ರದಾಯದಂತೆ 2 ವರ್ಷಗಳ ಕಾಲ ಕೃಷ್ಣ ಪೂಜೆ ಮತ್ತು ಅನ್ನಪ್ರಸಾದ ವಿತರಣೆಗೆ ನಾಲ್ಕು ಮುಹೂರ್ತಗಳು ನಡೆಯುತ್ತವೆ.ಪರ್ಯಾಯೋತ್ಸವಕ್ಕೆ ಕೃಷ್ಣಮಠದ ಪರಿಸರದಲ್ಲಿ ವಿಶಾಲವಾದ ಚಪ್ಪರ ಹಾಕುವ ಕಾರ್ಯಕ್ಕೂ ಮುಹೂರ್ತ ನಡೆಯುತ್ತದೆ. ಈ ಮೂಲಕ ಪರ್ಯಾಯೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಮಂದಿ ಭಕ್ತರ, ಅತಿಥಿಗಳ ಸತ್ಕಾರ , ಅನ್ನ ಸಂತರ್ಪಣೆ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ.ಶುಕ್ರವಾರ ಬೆಳಗ್ಗೆ 7,30ಕ್ಕೆ ಕೃಷ್ಣಮಠದ ಪಾರ್ಕಿಂಗ್ ಬಳಿ ವಿದ್ಯೋದಯ ಶಾಲೆಯ ಹಿಂಭಾಗದ ಪ್ರದೇಶದಲ್ಲಿ ಚಪ್ಪರ ಮುಹೂರ್ತ ನೆರವೇರಿತು. ಸುದರ್ಶನ್ ಭಟ್ ನೇತೃತ್ವದಲ್ಲಿ ಚಪ್ಪರ ಮುಹೂರ್ತದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ್ ಹೆಗ್ಡೆ, ಕಾರ್ಯದರ್ಶಿ ಮೋಹನ್ ಭಟ್, ಪ್ರಚಾರ ಸಂಚಾಲಕ ನಂದನ್ ಜೈನ್, ಹೊರೆಕಾಣಿಕೆ ಸಂಚಾಲಕ ಸುಪ್ರಸಾದ್ ಶೆಟ್ಟಿ, ಪ್ರಮುಖರಾದ ಶ್ರೀಕಾಂತ್ ನಾಯಕ್, ರಾಜೇಶ್ ರಾವ್, ಪದ್ಮ ರತ್ನಾಕರ್, ವೀಣಾ ಎಸ್. ಶೆಟ್ಟಿ, ವಿಷ್ಣು ಪ್ರಸಾದ್ ಪಾಡೀಗಾರ್, ಮಠದ ಕೊಟ್ಟಾರಿ ಸದಾಶಿವ ಎಂ. ಭಟ್ ಉಪಸ್ಥಿತರಿದ್ದರು.