ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಇದಕ್ಕೆ ಲಯನ್ಸ್ ಜಿಲ್ಲೆ 317ಸಿ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಅವರ ಅಧಿಕೃತ ಭೇಟಿ ಕಾರ್ಯಕ್ರಮ ನಗರದ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.
ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಇದಕ್ಕೆ ಲಯನ್ಸ್ ಜಿಲ್ಲೆ 317ಸಿ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಅವರ ಅಧಿಕೃತ ಭೇಟಿ ಕಾರ್ಯಕ್ರಮ ನಗರದ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಸಪ್ನಾ ಸುರೇಶ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಜಿಲ್ಲೆಯ ಮಾದರಿ ಕ್ಲಬ್‌ಗಳಲ್ಲಿ ಒಂದಾಗಿದೆ. ಅರ್ಥಪೂರ್ಣ ಕಾರ್ಯಕ್ರಮಗಳು ಮತ್ತು ಶಿಸ್ತುಬದ್ಧ ನಿರ್ವಹಣೆಯಿಂದ ಕೇವಲ ಐದು ವರ್ಷಗಳಲ್ಲಿ ಸರ್ವತೋಮುಖ ಬೆಳವಣಿಗೆ ಕಂಡು ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದರು.ಈ ವರ್ಷ ಲಯನ್ಸ್ ಜಿಲ್ಲೆ 317ಸಿ ಕರ್ನಾಟಕ, ಗೋವಾಗಳನ್ನೊಳಗೊಂಡ ಮಲ್ಟಿಪ್ ಜಿಲ್ಲೆ 317ರ ಅಗ್ರಮಾನ್ಯ ಜಿಲ್ಲೆಯಾಗಿ ಹೊರ ಹೊಮ್ಮಿದ್ದು ಇತ್ತೀಚೆಗೆ ಅಹಮದಾಬಾದಿನಲ್ಲಿ ನಡೆದ ಭಾರತ, ದಕ್ಷಿಣ ಏಶ್ಯಾ, ಮಧ್ಯ ಪ್ರಾಚ್ಯಗಳ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಅಧ್ಯಕ್ಷರ ವಿಶೇಷ ಮನ್ನಣೆಗೆ ಪಾತ್ರವಾಗಿದೆ ಎಂಬ ಸಂತಸವನ್ನು ಅವರು ಸಭೆಯಲ್ಲಿ ಹಂಚಿಕೊಂಡರು, ನಂತರ ಮೂವರು ಹೊಸ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯದ ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ ಸಭಾಧ್ಯಕ್ಷತೆ ವಹಿದ್ದರು. ದ್ವಿತೀಯ ಉಪ ಗವರ್ನರ್ ಹರಿಪ್ರಸಾದ್ ರೈ, ಜಿಲ್ಲಾ ಸಂಪುಟ ಕಾರ್ಯದರ್ಶಿ ಶಾಲಿನಿ ಡಿ. ಬಂಗೇರ, ಪ್ರಾಂತ್ಯಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಪ್ರಭು, ಹಿರಿಯ ಸಂಪುಟ ಸದಸ್ಯ ಸಿದ್ದರಾಜು, ಎಂಜಿನಿಯರ್ ರಮಾನಂದ್ ಶುಭಾಶಂಸನೆಗೈದರು.ವಲಯಾಧ್ಯಕ್ಷ ದನುಷ್ ಕೆ., ಜಿಲ್ಲಾ ಲಿಯೋ ಅಧ್ಯಕ್ಷ ಚಿರಾಗ್ ಪೂಜಾರಿ, ಕ್ಲಬ್ಬಿನ ಕಾರ್ಯದರ್ಶಿ ಹರಿಣಿ ರವಿ ಶೆಟ್ಟಿ, ಖಜಾಂಚಿ ಮಾರುತಿ ಎನ್. ಪ್ರಭು ಹಾಜರಿದ್ದರು. ಜಿಲ್ಲಾ ಸಂಪುಟ ಸದಸ್ಯ ರಂಜನ್ ಕಲ್ಕೂರ ಜಿಲ್ಲಾ ಗವರ್ನರರ ನೆರಳು ಯೋಜನೆಯಡಿ ಬೀದಿಬದಿ ವಾಪಾರಿಗಳಿಗಾಗಿ ಕೊಡುಗೆಗಳನ್ನು ಹಸ್ತಾಂತರಿಸಿದರು. ಕ್ಲಬ್ ವತಿಯಿಂದ ವೃದ್ಧಾಶ್ರಮ, ವಿಶೇಷ ಮಕ್ಕಳ ಶಾಲೆ ಹಾಗೂ ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರಿಗೆ ನೆರವು ನೀಡಲಾಯಿತು.ಕ್ಲಬ್‌ನ ಪ್ರಥಮ ಉಪಾಧ್ಯಕ್ಷೆ ಕವನ ರವಿರಾಜ ಸ್ವಾಗತಿಸಿದರು. ದ್ವಿತೀಯ ಉಪಾಧ್ಯಕ್ಷರಾದ ಹೆರಾಲ್ಡ್ ಸೋನ್ಸ್ ವಂದಿಸಿದರು. ಜಿಲ್ಲೆಯ ವಿವಿಧ ಕ್ಲಬ್‌ಗಳ ಸದಸ್ಯರು ಹಾಗೂ ಆಹ್ವಾನಿತ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.