ಉಡುಪಿ ಎಂಜಿಎಂ ಕಾಲೇಜ್‌: ‘ಗಾಂಧಿ ಆದರ್ಶಗಳು’ ಉಪನ್ಯಾಸ

| Published : Nov 06 2025, 02:45 AM IST

ಉಡುಪಿ ಎಂಜಿಎಂ ಕಾಲೇಜ್‌: ‘ಗಾಂಧಿ ಆದರ್ಶಗಳು’ ಉಪನ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮಾ ಗಾಂಧಿ ಸ್ಮಾರಕ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗ, ಇಂಗ್ಲಿಷ್ ಫೋರಂ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ‘ಎ ಭ್ರೀಫ್ ಸ್ಟಡಿ ಆಫ್ ಗಾಂಧಿಯನ್ ಫಿಲಾಸಫಿ : ಪ್ಯಾಸಿವ್ ರೆಸಿಸ್ಟೆನ್ಸ್’ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು.

ಉಡುಪಿ: ನಗರದ ಮಹಾತ್ಮಾ ಗಾಂಧಿ ಸ್ಮಾರಕ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗ, ಇಂಗ್ಲಿಷ್ ಫೋರಂ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ‘ಎ ಭ್ರೀಫ್ ಸ್ಟಡಿ ಆಫ್ ಗಾಂಧಿಯನ್ ಫಿಲಾಸಫಿ : ಪ್ಯಾಸಿವ್ ರೆಸಿಸ್ಟೆನ್ಸ್’ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು.

ಈ ವಿಷಯ ಪದವಿ ಪ್ರಥಮ ವರ್ಷದ ಪಠ್ಯಕ್ರಮದ ಭಾಗವಾಗಿದ್ದು, ವಿದ್ಯಾರ್ಥಿಗಳಿಗೆ ಗಾಂಧಿಯ ಚಿಂತನೆ ಹಾಗೂ ಅದರ ಸಮಕಾಲೀನ ಪ್ರಸ್ತುತತೆಯ ಕುರಿತು ಆಳವಾದ ಅರಿವು ನೀಡುವ ಉದ್ದೇಶದಿಂದ ನಡೆಸಲಾಯಿತು.ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಶೋಧಕ ಮತ್ತು ಸಂಯೋಜಕ ವಿನಿತ್ ರಾವ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಪ್ಯಾಸಿವ್ ರೆಸಿಸ್ಟನ್ಸ್ ಎಂಬ ಗಾಂಧೀಜಿ ನೀಡಿದ ತತ್ವದ ಕುರಿತು ಸ್ಫೂರ್ತಿದಾಯಕ ಉಪನ್ಯಾಸ ನೀಡಿದರು. ಮಹಾತ್ಮ ಗಾಂಧೀಜಿ ಸತ್ಯ, ಅಹಿಂಸೆ ಮತ್ತು ನೈತಿಕ ಧೈರ್ಯ ಎಂಬ ಮೂಲಭೂತ ತತ್ವಗಳನ್ನು ವಿಶದವಾಗಿ ವಿವರಿಸಿ, ಇವುಗಳು ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗೆ ಶಕ್ತಿಯುತವಾದ ಆಯುಧಗಳಾಗಿ ಹೇಗೆ ಪರಿಣಮಿಸಿದವು ಎಂಬುದನ್ನು ಮನದಟ್ಟುಗೊಳಿಸಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಅಶ್ವಿನಿ ಸಿ. ಆಚಾರ್ಯ ವಂದಿಸಿದರು. ಉಪನ್ಯಾಸಕಿ ಕೋಲೀನ್ ಎ. ಲೋಬೋ ನಿರೂಪಿಸಿದರು. ಇಂಗ್ಲಿಷ್ ಭಾಷಾ ಉಪನ್ಯಾಸಕಿ ಸ್ಪೂರ್ತಿ ಎಸ್. ಫರ್ನಾಂಡಿಸ್ ಕಾರ್ಯಕ್ರಮ ಸಂಯೋಜಿಸಿದರು.