ಉಡುಪಿ ಎಂಜಿಎಂ ಸಂಧ್ಯಾ ಕಾಲೇಜ್‌: ಫೋಟೋಗ್ರಫಿ ಕಾರ್ಯಾಗಾರ

| Published : Sep 25 2025, 01:02 AM IST

ಸಾರಾಂಶ

ಮಹಾತ್ಮಾ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ‘ಫ್ರೇಮ್ ಯುವರ ಫ್ಯೂಚರ್ - ಬೇಸಿಕ್ ಟು ಕ್ಯಾರಿಯರ್ ಬ್ರೇಕ್ ತ್ರೂಸ್’ ಎಂಬ ಛಾಯಾಗ್ರಹಣ ಕಲೆ - ವೃತ್ತಿಯ ಬಗ್ಗೆ ವಿಶೇಷ ಕಾರ್ಯಾಗಾರ ಬುಧವಾರ ನಡೆಯಿತು.

ಉಡುಪಿ: ನಗರದ ಮಹಾತ್ಮಾ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ‘ಫ್ರೇಮ್ ಯುವರ ಫ್ಯೂಚರ್ - ಬೇಸಿಕ್ ಟು ಕ್ಯಾರಿಯರ್ ಬ್ರೇಕ್ ತ್ರೂಸ್’ ಎಂಬ ಛಾಯಾಗ್ರಹಣ ಕಲೆ - ವೃತ್ತಿಯ ಬಗ್ಗೆ ವಿಶೇಷ ಕಾರ್ಯಾಗಾರ ಬುಧವಾರ ಬೆಳಗ್ಗೆ ಕಾಲೇಜಿನ ಟಿ. ಮೋಹಂದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಯಾಗಿ ಕಾಲೇಜಿನ ಪ್ರಾಂಶುಪಾಲ ಡಾ. ದೇವೀದಾಸ್ ಎಸ್. ನಾಯಕ್ ಉಪಸ್ಥಿತರಿದ್ದರು.

ಹಿರಿಯ ಛಾಯಾಗ್ರಾಹಕ ಹಾಗೂ ಉದಯವಾಣಿ ದಿನಪತ್ರಿಕೆಯ ಹಿರಿಯ ಸುದ್ದಿಚಿತ್ರ ಪತ್ರಕರ್ತರಾದ ಅಸ್ಟ್ರೋ ಮೋಹನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಛಾಯಾಗ್ರಹಣದ ಮೂಲ ತತ್ವಗಳು, ತಂತ್ರಜ್ಞಾನ ಹಾಗೂ ಛಾಯಾಗ್ರಹಣದಲ್ಲಿ ವೃತ್ತಿಜೀವನ ರೂಪಿಸುವ ಸಾಧ್ಯತೆಗಳ ಕುರಿತು ಮಾರ್ಗದರ್ಶನ ನೀಡಿದರು.

ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಛಾಯಾಗ್ರಹಣ ಕ್ಷೇತ್ರದ ಬಗ್ಗೆ ಹೊಸ ಪ್ರೇರಣೆ ಮೂಡಿದ್ದು, ಭವಿಷ್ಯದಲ್ಲಿ ಈ ಕ್ಷೇತ್ರವನ್ನು ವೃತ್ತಿಜೀವನವಾಗಿ ಆರಿಸಿಕೊಳ್ಳಲು ಉತ್ಸಾಹ ಹುಟ್ಟಿಸಿತು.

ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ಬಿಬಿಎ ವಿದ್ಯಾರ್ಥಿನಿ ದಿಶಾ ನಿರ್ವಹಿಸಿದರು. ಅತಿಥಿ ಪರಿಚಯವನ್ನು ಪ್ರಥಮ ಬಿಬಿಎ ವಿದ್ಯಾರ್ಥಿನಿ ಡಿಯೋನಾ ಪರ್ಲ್ ನೀಡಿದರು.