ಸಾರಾಂಶ
ಕಳೆದ ಎರಡು ದಿನಗಳಿಂದ ಸುರಿದ ಮಳೆ ಮತ್ತು ಗಾಳಿಗೆ ಹತ್ತಾರು ಮಂದಿ ಅಡಕೆ ಕೃಷಿಕರಿಗೆ ಲಕ್ಷಾಂತರ ರು. ಹಾನಿಯಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆ ಮತ್ತು ಗಾಳಿಗೆ ಹತ್ತಾರು ಮಂದಿ ಅಡಕೆ ಕೃಷಿಕರಿಗೆ ಲಕ್ಷಾಂತರ ರು. ಹಾನಿಯಾಗಿದೆ. ಮುಖ್ಯವಾಗಿ ಬುಧವಾರ ರಾತ್ರಿ ಹೆಬ್ರಿ ತಾಲೂಕಿನಲ್ಲಿ ಬೀಸಿದ ಗಾಳಿಗೆ ಸಾವಿರಾರು ಅಡಕೆ - ತೆಂಗು ಮತ್ತು ಇತರ ಮರಗಳು ಧರೆಗುರುಳಿವೆ.ಹೆಬ್ರಿ ತಾಲೂಕಿನ ಚಾರಾ ಗ್ರಾಮದ ಆದು ನಾಯ್ಕ ಅವರ 25 ಅಡಕೆ ಮರಗಳಿಗೆ 50,000 ರು., ಪಮ್ಮ ಮಡಿವಾಳ್ತಿ ಅವರ 20 ಅಡಕೆ ಮರಳಿಗೆ 40,000 ರು., ನಾಗಯ್ಯ ಶೆಟ್ಟಿ ಅವರ 200 ಅಡಕೆ ಮರ, 4 ತೆಂಗು ಮರ, 25 ಗೇರು ಮರ ಹಾಗೂ 2 ಹಲಸು ಮರಗಳಿಗೆ 2,20,000 ರು., ಅಕ್ಕಯ್ಯ ಅಣ್ಣಯ್ಯ ಪೂಜಾರಿ ಅವರ 80 ಅಡಕೆ ಮರ, 2 ತೆಂಗು ಮರ, 1 ಮಾವಿನ ಮರ ಹಾಗೂ 2 ಹಲಸು ಮರಗಳಿಗೆ 1,10,000 ರು., ಶೋಭಾ ಜೋಸೆಫ್ ಅವರ 650 ಅಡಕೆ ಮರ, 380 ಕೋಕೋ ಗಿಡ, 100 ಜಾಯಿ ಕಾಯಿ ಗಿಡ ಹಾಗೂ 200 ಕಾಳು ಮೆಣಸು ಗಿಡಗಳಿಗೆ 3,80,000 ರು., ಸುದರ್ಶನ್ ಶೆಟ್ಟಿ ಅವರ 13 ಅಡಕೆ ಮರಗಳಿಗೆ 26,000 ರು., ಪ್ರೇಮ ಶೆಟ್ಟಿ ಅವರ 20 ಅಡಕೆಗಳಿಗೆ 15,000 ರು.ಗಳಷ್ಟು ನಷ್ಟ ಸಂಭವಿಸಿದೆ.
ಅಲ್ಲದೆ ಹೆಬ್ರಿ ತಾಲೂಕಿನ ಕುಚ್ಚೂರಿನ ಕನಕ ಪೂಜಾರಿ ಮನೆಗೆ 40,000 ರು., ಸುಮತಿ ಮಂಜುನಾಥ ಮನೆಗೆ 25,000 ರು., ವಸಂತಿ ವಿಜಯ ಪೂಜಾರಿ ಮನೆಗೆ 20,000 ರು., ರತಿ ರಮೇಶ ಪೂಜಾರಿ ಮನೆಗೆ 20,000 ರು., ಬಾಬಿ ಪಾಂಡುರಂಗ ಶೆಟ್ಟಿಮನೆಗೆ 40,000 ರು., ನಂದ್ಯಪ್ಪ ಪೂಜಾರಿ ಮನೆಗೆ 35,000 ರು., ರುಕ್ಕಿಣಿ ಅಣ್ಣಯ್ಯ ಪೂಜಾರಿ ಮನೆ 25,000 ರು., ಚಾರಾ ಗ್ರಾಮದ ನಾಗಯ್ಯ ಶೆಟ್ಟಿ ಕೊಟ್ಟಿಗೆಗೆ 19,600 ರು., ಪಮ್ಮ ಮಡಿವಾಳ ಮನೆಗೆ 6,000 ರು., ವಿಷ್ಣು ನಾಯ್ಕ ಮನೆಗೆ 12,000 ರು., ಪಾರ್ವತಿ ಮನೆಗೆ 3,000 ರು., ಮಾಲತಿ ರಾಮ ನಾಯ್ಕ್ ಮನೆಗೆ 7,700 ರು., ಸೀತಾ ಕೃಷ್ಣಮೂರ್ತಿ ಮನೆಗೆ 8,800 ರು., ಅಮ್ಮಣಿ ಮಡಿವಾಳ ಕೊಟ್ಟಿಗೆಗೆ 8,000 ರು., ಉಡುಪಿ ತಾಲೂಕಿನ ಮಲ್ಪೆಯ ಗಿರೀಶ್ ಕರ್ಕೇರ ಮನೆಗೆ 50,000 ರು., ಬ್ರಹ್ಮಾವರ ತಾಲೂಕಿನ ಕಾಡೂರು ಗ್ರಾಮದ ರತ್ನ ರಾಮ ಮನೆಗೆ 30,000 ರು., ಹಾವಂಜೆಯ ಸುಂದರ ಪೂಜಾರಿ ಮನೆಗೆ 20,000 ರು.ಗಳಷ್ಟು ಹಾನಿಯಾಗಿದೆ.