ಸಾರಾಂಶ
ಈ ವಾಹನವು 6.0 ಕ್ಯೂಬಿಕ್ ಸಾಮರ್ಥ್ಯ ಹೊಂದಿದ್ದು, ಹೈ ಪ್ರೆಶರ್ ವ್ಯಾಕ್ಯೂಮ್ ಪೈಪ್‌ನಿಂದ 1 ಗಂಟೆಯ ಅವಧಿಯಲ್ಲಿ ಗರಿಷ್ಠ 5 ರಿಂದ 6 ಕಿ.ಮೀ. ವರೆಗೆ ರಸ್ತೆಯ ಬದಿ ಇರುವ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸುತ್ತದೆ ಎಂದು ನಗರಸಭೆಯ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿನಗರಸಭೆಯ ರಸ್ತೆಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ನೂತನವಾಗಿ ಖರೀದಿಸಲಾದ ನಗರಸಭಾ ರಸ್ತೆ ಸ್ವಚ್ಛಗೊಳಿಸುವ ಯಂತ್ರಕ್ಕೆ ಮಂಗಳವಾರ ಶಾಸಕ ಯಶ್ಪಾಲ್ ಸುವರ್ಣ ವಾಹನವನ್ನು ಚಲಾಯಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಪೌರಾಯುಕ್ತ ರಾಯಪ್ಪ, ಸ್ಥಾಯಿ ಸಮೀತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು, ನಿಟ್ಟೂರು ವಾರ್ಡ್‌ನ ಕೌನ್ಸಿಲರ್ ಸಂತೋಷ್ ಜತ್ತನ್ನ, ಗುಂಡಿಬೈಲು ವಾರ್ಡ್‌ನ ಕೌನ್ಸಿಲರ್ ಪ್ರಭಾಕರ ಪೂಜಾರಿ, ಕಕ್ಕುಂಜೆ ವಾರ್ಡ್‌ನ ಕೌನ್ಸಿಲರ್ ಬಾಲಕೃಷ್ಣ ಶೆಟ್ಟಿ, ಇಂದಿರಾನಗರ ವಾರ್ಡ್‌ನ ಕೌನ್ಸಿಲರ್ ಚಂದ್ರಶೇಖರ, ಕಿನ್ನಿಮುಲ್ಕಿ ವಾರ್ಡ್‌ನ ಕೌನ್ಸಿಲರ್ ಅಮೃತಾ ಕೃಷ್ಣಮೂರ್ತಿ, ಒಳಕಾಡು ವಾರ್ಡ್‌ನ ಕೌನ್ಸಿಲರ್ ರಜನಿ ಹೆಬ್ಬಾರ್, ಸುಬ್ರಹ್ಮಣ್ಯ ನಗರ ವಾರ್ಡ್‌ನ ಕೌನ್ಸಿಲರ್ ಜಯಂತಿ, ಅಜ್ಜರಕಾಡು ವಾರ್ಡ್‌ನ ಕೌನ್ಸಿಲರ್ ರಶ್ಮಿ ಭಟ್, ಮಲ್ಪೆ ಸೆಂಟ್ರಲ್ ವಾರ್ಡ್‌ನ ಕೌನ್ಸಿಲರ್ ಎಡ್ಲಿನ್ ಕರ್ಕಡ, ನಗರ ಸಭೆ ಕಂದಾಯ ಅಧಿಕಾರಿ ಸಂತೋಷ್ ಎಸ್.ಡಿ., ನಗರ ಸಭೆಯ ಆರೋಗ್ಯ ನಿರೀಕ್ಷಕ ಮನೋಹರ್, ಸುರೇಂದ್ರ ಹಾಗೂ ನಗರ ಸಭೆಯ ಎಲ್ಲಾ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ನೂತನ ರಸ್ತೆ ಸ್ವಚ್ಛಗೊಳಿಸುವ ಯಂತ್ರದ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.ಈ ವಾಹನವು 6.0 ಕ್ಯೂಬಿಕ್ ಸಾಮರ್ಥ್ಯ ಹೊಂದಿದ್ದು, ಹೈ ಪ್ರೆಶರ್ ವ್ಯಾಕ್ಯೂಮ್ ಪೈಪ್‌ನಿಂದ 1 ಗಂಟೆಯ ಅವಧಿಯಲ್ಲಿ ಗರಿಷ್ಠ 5 ರಿಂದ 6 ಕಿ.ಮೀ. ವರೆಗೆ ರಸ್ತೆಯ ಬದಿ ಇರುವ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸುತ್ತದೆ ಎಂದು ನಗರಸಭೆಯ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.