ಉಡುಪಿ ಒಳಕಾಡು ಸರ್ಕಾರಿ ಶಾಲೆ ವಾರ್ಷಿಕೋತ್ಸವ ಸಂಪನ್ನ

| Published : Jan 08 2025, 12:16 AM IST

ಉಡುಪಿ ಒಳಕಾಡು ಸರ್ಕಾರಿ ಶಾಲೆ ವಾರ್ಷಿಕೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಒಳಕಾಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಸಂಭ್ರಮದಿಂದ ಜರುಗಿತು. ಈ ಸಂದರ್ಭ ವಿಜ್ಞಾನ ಮತ್ತು ಗಣಿತ ಮೇಳ, ಪ್ರದರ್ಶನವನ್ನು ನಿವೃತ್ತ ಶಿಕ್ಷಕಿ ಸವಿತಾ ದೇವಿ ಹಾಗೂ ಕಲಾಮೇಳವನ್ನು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಆರ್. ಹೆಗಡೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿನಗರದ ಒಳಕಾಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಸಂಭ್ರಮದಿಂದ ಜರುಗಿತು.

ಈ ಸಂದರ್ಭ ವಿಜ್ಞಾನ ಮತ್ತು ಗಣಿತ ಮೇಳ, ಪ್ರದರ್ಶನವನ್ನು ನಿವೃತ್ತ ಶಿಕ್ಷಕಿ ಸವಿತಾ ದೇವಿ ಹಾಗೂ ಕಲಾಮೇಳವನ್ನು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಆರ್. ಹೆಗಡೆ ಉದ್ಘಾಟಿಸಿದರು.ನಂತರ ನಡೆದ ವಾರ್ಷಿಕೋತ್ಸವವನ್ನು ಪ್ರಾಥಮಿಕ ವಿಭಾಗದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗೇಶ್ ಪ್ರಭು ಉದ್ಘಾಟಿಸಿದರು. ಶಾಲಾ ವಾರ್ಷಿಕ ಸಂಚಿಕೆ ‘ಹೊಂಗಿರಣ’ ಮತ್ತು ‘ಚಿಗುರು’ ಮಕ್ಕಳ ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಡಾ. ವಿರೂಪಾಕ್ಷ ವಹಿಸಿ, ಮಕ್ಕಳು ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು.ವೇದಿಕೆಯಲ್ಲಿ ಸ್ಥಳೀಯ ಗಣ್ಯರಾದ ಅಮೃತ್ ಶೆಣೈ, ಪ್ರಕಾಶ್ಚಂದ್ರ, ಸೌಮ್ಯ ಶೇಟ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಪೂರ್ಣಿಮಾ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಶಾಲಾ ನಾಯಕ ಫಜಲ್ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಕುಸುಮಾ ಜಿ. ಮೆಂಡನ್ ಸ್ವಾಗತಿಸಿದರು. ಸಹಶಿಕ್ಷಕಿ ಸುಮತಿ ವರದಿ ವಾಚಿಸಿದರು. ಸಹ ಶಿಕ್ಷಕಿ ವಸಂತಿ ವಂದಿಸಿದರು. ವಿದ್ಯಾರ್ಥಿಗಳಾದ ಅನ್ವಿ, ಪಂಚಮಿ ಹಾಗೂ ಸಹಶಿಕ್ಷಕಿ ಸುವಾಸಿನಿ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.