ಉಡುಪಿ ಶ್ರೀ ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ಸಾಂಸ್ಕೃತಿಕ ಪ್ರತಿಭಾ ಮತ್ತು ಬಹುಮಾನ ವಿತರಣಾ ಸಮಾರಂಭ
ಉಡುಪಿ: ಪ್ರತಿಭೆ ಸೃಜನಶೀಲತೆಯನ್ನು ಒಳಗೊಂಡಿರ ಬೇಕು. ಇಂದಿನ ಜಾಗತೀಕರಣದ ಸ್ಪಧಾ೯ತ್ಮಕ ಯುಗದಲ್ಲಿ ಬದುಕಿನ ಸವಾಲುಗಳನ್ನು ಎದುರಿಸಿ ನಿಲ್ಲಬೇಕಾದರೆ ಅಂಕಗಳೊಂದೆ ಸಾಕಾಗುವುದಿಲ್ಲ. ಇದರ ಜೊತೆಗೆ ವ್ಯಕ್ತಿತ್ವದ ಪರಿಪೂರ್ಣತೆಗೆ ಪಠ್ಯೇತರ ಚಟುವಟಿಕೆಗಳು ಕೂಡಾ ಅಷ್ಟೇ ಮುಖ್ಯ. ಶಿಕ್ಷಣದ ಅಂತಿಮ ಗುರಿ ಆತ್ಮದ ಕಣ್ಣನ್ನು ಬೆಳಕಿನೆಡೆ ತಿರುಗಿಸುವುದೇ ನಿಜವಾದ ಶಿಕ್ಷಣ ಇಂತಹ ಪರಿಪೂರ್ಣ ಶಿಕ್ಷಣ ನೀಡುವಲ್ಲಿ ಶ್ರೀ ಪೂಣ೯ ಪ್ರಜ್ಞಾ ಕಾಲೇಜು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ ಎಂದು ಎಂಜಿಎಂ ಕಾಲೇಜಿನ ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.ಉಡುಪಿ ಶ್ರೀ ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ಸಾಂಸ್ಕೃತಿಕ ಪ್ರತಿಭಾ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಪೂರ್ಣಪ್ರಜ್ಞಾ ಪ.ಪೂ.ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಪಿ.ಎಸ್.ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಸಂತೇೂಷ ಕುಮಾರ್, ಹಿರಿಯ ಉಪನ್ಯಾಸಕರು ಹಾಜರಿದ್ದರು.ವಿದ್ಯಾರ್ಥಿ ಪ್ರತಿನಿಧಿ ವೈಷ್ಣವಿ ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷೆ ದೀಪ್ತಿ ವರದಿ ಮಂಡಿಸಿದರು. ಕಾರ್ಯದರ್ಶಿ ಡಿಯೇೂನ್ ಹಾಡ್ರೀಲ್ ವಂದಿಸಿದರು. ವಿದ್ಯಾರ್ಥಿನಿ ಶೀಯಾ ಶೆಟ್ಟಿ ನಿರೂಪಿಸಿದರು.