ಮುಂಬೈ: ಸಾವಿರ ವಿದ್ಯಾರ್ಥಿಗಳಿಗೆ ಕೋಟಿ ಗೀತಾ ಲೇಖನ ದೀಕ್ಷೆ

| Published : Oct 21 2023, 12:30 AM IST

ಮುಂಬೈ: ಸಾವಿರ ವಿದ್ಯಾರ್ಥಿಗಳಿಗೆ ಕೋಟಿ ಗೀತಾ ಲೇಖನ ದೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬೈಯಲ್ಲಿ ಪುತ್ತಿಗೆ ಶ್ರೀಗಳಿಂದ ಸಾವಿರ ವಿದ್ಯಾರ್ಥಿಗಳಿಗೆ ಕೋಟಿ ಗೀತಾ ಲೇಖನ ದೀಕ್ಷೆ
ಕನ್ನಡಪ್ರಭ ವಾರ್ತೆ ಉಡುಪಿ ಭಾವಿ ಪರ್ಯಾಯ ಪೀಠಾಧೀಶ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮುಂಬೈಯ ಶ್ರೀ ಅದಮಾರು ಮಠದ ಶ್ರೀ ಪೂರ್ಣಪ್ರಜ್ಞ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೋಟಿ ಗೀತಾ ಲೇಖನ ದೀಕ್ಷೆ ನೀಡಿದರು. ಹಿರಿಯ ಶ್ರೀಗಳಾದ ಸುಗುಣೇಂದ್ರ ತೀರ್ಥ ಶ್ರೀ ಪಾದರು, ಜಗತ್ತಿನ ಮಾರ್ಗದರ್ಶಕ ಗ್ರಂಥವಾದ ಭಗವದ್ಗೀತೆಯ ವಿಶೇಷ ಅವಶ್ಯಕತೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಗೀತೆ ಪ್ರತಿಯೊಬ್ಬರಿಗೂ ಗುರಿ ತಲುಪಿಸುವ ಜಿಪಿಎಸ್ ಎಂದರು. ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಆಧ್ಯಾತ್ಮಿಕ ತಮ್ಮನ್ನು ಆಕರ್ಷಿಸಿ, ಜೀವನ ಪರಿವರ್ತನೆ ಮಾಡಿದ ಪರಿಯನ್ನು ವಿವರಿಸುತ್ತಾ ಭಗವದ್ಗೀತೆಯಿಂದ ವಿದ್ಯಾರ್ಥಿಗಳ ಜೀವನ ಉತ್ಕೃಷ್ಟವಾಗುವ ಬಗೆ ವಿವರಿಸಿದರು. ಶ್ರೀ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಎನ್.ಆರ್.ರಾವ್, ಸರ್ವಜ್ಞ ಉಡುಪ, ನಾಗೇಂದ್ರ ರಾವ್ ಮೊದಲಾದವರು ಶ್ರೀಗಳನ್ನು ಸ್ವಾಗತಿಸಿ ಗೌರವಿಸಿದರು. ಅಪರ್ಣಾ ನಿರೂಪಿಸಿದರು. ಉಭಯ ಶ್ರೀಗಳ ಗೌರವಾರ್ಥವಾಗಿ ಭವ್ಯ ಮೆರವಣಿಗೆಯೊಂದಿಗೆ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮರ್ಪಿಸಿದರು.