ಸಾರಾಂಶ
ಭಾರತೀಯ ಹವಾಮಾನ ಇಲಾಖೆ ಇನ್ನೂ ಮೂರು ದಿನಗಳ ಕಾಲ ಕರಾವಳಿಯಲ್ಲಿ ಉತ್ತಮ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಜೊತೆಗೆ ಗಾಳಿಯೂ ಬೀಸಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಎರಡು ದಿನಗಳಿಂದ ಕಡಿಮೆಯಾಗಿದ್ದ ಮಳೆ, ಸೋಮವಾರ ಮತ್ತೆ ಆರಂಭವಾಗಿದೆ. ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಆದರೆ ಸಂಜೆಯಾಗುತ್ತಲೇ ಗುಡುಗು ಮಿಂಚು ಸಹಿತ ಜಡಿಮಳೆ ಆರಂಭವಾಗಿದೆ. ಮುಖ್ಯವಾಗಿ ಕಾರ್ಕಳ ಮತ್ತು ಹೆಬ್ರಿ ಭಾಗದಲ್ಲಿ ಭಾರಿ ಮಳೆಯಾಗಿದೆ.ಭಾರತೀಯ ಹವಾಮಾನ ಇಲಾಖೆ ಇನ್ನೂ ಮೂರು ದಿನಗಳ ಕಾಲ ಕರಾವಳಿಯಲ್ಲಿ ಉತ್ತಮ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಜೊತೆಗೆ ಗಾಳಿಯೂ ಬೀಸಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.
ಜಿಲ್ಲೆಯಲ್ಲಿ ಭಾನುವಾರ ಸರಾಸರಿ 41 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 24.10, ಕುಂದಾಪುರ 71.30, ಉಡುಪಿ 14.30, ಬೈಂದೂರು 61.80, ಬ್ರಹ್ಮಾವರ 14.10, ಕಾಪು 10.10, ಹೆಬ್ರಿ 35.80 ಮಿ.ಮೀ. ಮಳೆ ದಾಖಲಾಗಿದೆ.* ಹಾನಿ ಪ್ರದೇಶಕ್ಕೆ ಕಾಪು ಶಾಸಕ ಭೇಟಿ
ಗಾಳಿ ಮಳೆಗೆ ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯ ಹತ್ರಬೈಲು ಗಣಪತಿ ಗೌರಿ ಅವರ ದನದ ಕೊಟ್ಟಿಗೆ ಹಾಗೂ ಬಾಡಾಲಜೆಡ್ಡು ಪವಿತ್ರ ಪೂಜಾರಿ ಅವರ ಮನೆಗೆ ಹಾನಿ ಉಂಟಾಗಿದ್ದು, ಸೋಮವಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ಶೀಘ್ರ ಗರಿಷ್ಠ ಪರಿಹಾರ ನೀಡುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು.ಪಂಚಾಯಿತಿ ಅಧ್ಯಕ್ಷೆ ಚೇತನಾ ಶೆಟ್ಟಿ, ಉಪಾಧ್ಯಕ್ಷ ದೇವು ಪೂಜಾರಿ, ಸದಸ್ಯರಾದ ತುಕಾರಾಮ್ ನಾಯಕ್, ಸಚಿನ್ ಪೂಜಾರಿ, ಜಗದೀಶ್ ಶೆಟ್ಟಿ, ಶಂಕುತಲಾ ಶೆಟ್ಟಿ, ಉಷಾ ನಾಯಕ್, ಉಷಾಲತಾ ಪೂಜಾರಿ, ಮಾಜಿ ಅಧ್ಯಕ್ಷರಾದ ಸುರೇಶ್ ಸೆರ್ವೇಗಾರ್ ಉಪಸ್ಥಿತರಿದ್ದರು.