ಸಾರಾಂಶ
ನಾಡಿನ ಖ್ಯಾತ ಇತಿಹಾಸತಜ್ಞ, ಸಂಶೋಧಕ, ದಿ. ಡಾ.ಪಾದೂರು ಗುರುರಾಜ್ ಭಟ್ ಅವರ ಜನ್ಮಶತಾಬ್ದಿಯ ನೆನಪಿಗಾಗಿ ಡಾ.ಪಾದೂರು ಗುರುರಾಜ್ ಭಟ್ ಸ್ಮಾರಕ ಟ್ರಸ್ಟ್ ವತಿಯಿಂದ ಫೆ.27ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಉಡುಪಿ ಪುರಭವನದಲ್ಲಿ ಭಾರತೀಯ ಇತಿಹಾಸ ಮತ್ತು ವಿಶೇಷವಾಗಿ ದೇವಾಲಯಗಳ, ದೇವತಾಮೂರ್ತಿಗಳ ಕುರಿತಾದ ಸಂಶೋಧನೆಯಲ್ಲಿ ಇದುವರೆಗೆ ಸಾಗಿಬಂದ ವಿವರಗಳನ್ನೇ ಕೇಂದ್ರಿಕರಿಸಿ ಸಂಶೋಧನೆ ಮತ್ತು ಬರಹಗಳಿಂದ ಪ್ರಸಿದ್ಧರಾದ ವಿದ್ವಾಂಸರ ಸಮಾವೇಶ ಏರ್ಪಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ನಾಡಿನ ಖ್ಯಾತ ಇತಿಹಾಸತಜ್ಞ, ಸಂಶೋಧಕ, ದಿ. ಡಾ.ಪಾದೂರು ಗುರುರಾಜ್ ಭಟ್ ಅವರ ಜನ್ಮಶತಾಬ್ದಿಯ ನೆನಪಿಗಾಗಿ ಡಾ.ಪಾದೂರು ಗುರುರಾಜ್ ಭಟ್ ಸ್ಮಾರಕ ಟ್ರಸ್ಟ್ ವತಿಯಿಂದ ಫೆ.27ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಉಡುಪಿ ಪುರಭವನದಲ್ಲಿ ಭಾರತೀಯ ಇತಿಹಾಸ ಮತ್ತು ವಿಶೇಷವಾಗಿ ದೇವಾಲಯಗಳ, ದೇವತಾಮೂರ್ತಿಗಳ ಕುರಿತಾದ ಸಂಶೋಧನೆಯಲ್ಲಿ ಇದುವರೆಗೆ ಸಾಗಿಬಂದ ವಿವರಗಳನ್ನೇ ಕೇಂದ್ರಿಕರಿಸಿ ಸಂಶೋಧನೆ ಮತ್ತು ಬರಹಗಳಿಂದ ಪ್ರಸಿದ್ಧರಾದ ವಿದ್ವಾಂಸರ ಸಮಾವೇಶ ಏರ್ಪಡಿಸಲಾಗಿದೆ.ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಪಾದೂರು ವಿವರಗಳನ್ನು ನೀಡಿದರು.ಭಾರತೀಯ ಪ್ರಾಚೀನ ದೇವಾಲಯಗಳ ಸಂರಕ್ಷಣೆ ಮತ್ತು ಪುನರ್ನಿರ್ಮಾಣದ ಬಗ್ಗೆ ಹಿರಿಯ ಇತಿಹಾಸ ತಜ್ಞ ಕೆ.ಕೆ. ಮಹಮ್ಮದ್, ದೇವಾಲಯಗಳ ವಾಸ್ತುವಿನ್ಯಾಸ, ರಚನೆ ಮತ್ತು ಅಲಂಕಾರಿಕ ಕೆತ್ತನೆ ಬಗ್ಗೆ ಪ್ರಾಚೀನ ಭಾರತೀಯರ ನೈಪುಣ್ಯ ಕೌಶಲ ಮತ್ತು ವಿಜ್ಞಾನ ಹಾಗೂ ಸೌಂದರ್ಯ ವಿಷಯದ ಬಗ್ಗೆ ಸುರೇಂದ್ರನಾಥ್ ಬೊಪ್ಪರಾಜು, ಇಂದಿನ ಭಾರತೀಯ ಇತಿಹಾಸದ ಪಠ್ಯ ಮುಚ್ಚಿಟ್ಟ ಸಾಂಸ್ಕೃತಿಕ ಆಧ್ಯಾತ್ಮಿಕ ಆಯಾಮಗಳು ಮತ್ತು ಪೂರ್ವನಿರ್ಧಾರಿತ ಪಠ್ಯಗಳಲ್ಲಿ ಅಸತ್ಯಗಳು ವಿಷಯದ ಬಗ್ಗೆ ವಿಕ್ರಂ ಸಂಪತ್ ಅಭಿಪ್ರಾಯ ಮಂಡಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಇತಿಹಾಸಕಾರರೊಂದಿಗೆ ಸಂವಾದಕ್ಕೆ ಅವಕಾಶವಿದೆ.ದಿ.ಗುರುರಾಜ ಭಟ್ ಅವರ ಬಗ್ಗೆ ಅವರ ಶಿಷ್ಯೆ ಮಾಲತಿ ಮೂರ್ತಿ ಮಾತನಾಡಲಿದ್ದಾರೆ. ಇದೇ ವೇಳೆ ಪಾದೂರು ಗುರುರಾಜ ಭಟ್ ಜನ್ಮಶತಮಾನೋತ್ಸವ ಪ್ರಶಸ್ತಿ- 2025ನ್ನು ಯುವ ಇತಿಹಾಸ ತಜ್ಞ ವಿಕ್ರಂ ಸಂಪತ್ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಕೋಶಾಧಿಕಾರಿ ಪರಶುರಾಮ್ ಭಟ್, ಸದಸ್ಯರಾದ ವೆಂಕಟೇಶ ಭಟ್ ಮತ್ತು ರಘುಪತಿ ರಾವ್ ಉಪಸ್ಥಿತರಿದ್ದರು.