ಉಡುಪಿ ಎಸ್‌ಡಿಎಂಎ ಕಾಲೇಜು: ‘ಛಾಯಾ ನಿದರ್ಶನ’ ರಾಷ್ಟ್ರೀಯ ವಿಚಾರಗೋಷ್ಠಿ ಸಂಪನ್ನ

| Published : Jul 01 2025, 12:47 AM IST

ಉಡುಪಿ ಎಸ್‌ಡಿಎಂಎ ಕಾಲೇಜು: ‘ಛಾಯಾ ನಿದರ್ಶನ’ ರಾಷ್ಟ್ರೀಯ ವಿಚಾರಗೋಷ್ಠಿ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ಮಾರ್ಗದರ್ಶನ ಹಾಗೂ ಐಕ್ಯುಎಸಿಯ ಸಹಯೋಗದೊಂದಿಗೆ ಛಾಯಾ ನಿದರ್ಶನ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಯನ್ನು ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ಮಾರ್ಗದರ್ಶನ ಹಾಗೂ ಐಕ್ಯುಎಸಿಯ ಸಹಯೋಗದೊಂದಿಗೆ ಛಾಯಾ ನಿದರ್ಶನ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಯನ್ನು ಆಯೋಜಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಮಾಮತಾ ಕೆ.ವಿ., ಎಕ್ಸ್-ರೇಗಳು ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟು ಮುಖ್ಯವೆಂಬುದರೊಂದಿಗೆ ಪ್ರಾಯೋಗಿಕ ದೃಷ್ಟಿಕೋನದಿಂದ ಅವುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯತೆಯನ್ನು ವಿವರಿಸಿದರು.ಪ್ರಥಮ ಅಧಿವೇಶನದಲ್ಲಿ ಸಂಸ್ಥೆಯ ಶ್ರೇಷ್ಠ ಪ್ರಾಧ್ಯಾಪಕರಾದ ಡಾ. ಮುರಳಿಧರ ಶರ್ಮಾ ಅವರು ‘ಚೆಸ್ಟ್ ಮತ್ತು ಅಬ್ಡೊಮೆನ್ ಎಕ್ಸರೇ -ಚೆಸ್ಟ್ ಟು ಗಟ್: ಎ ಪ್ರಾಕ್ಟಿಕಲ್ ಎಕ್ಸ-ರೇ ಅಪ್ರೋಚ್’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.ಬೆಳಗಾವಿಯ ಕಂಕಣವಾಡಿ ಕೆಎಲ್‌ಇ ವಿಶ್ವವಿದ್ಯಾಲಯದ ಡಾ. ಹೇಮಲತಾ ಎಸ್. ಶೇಟ್, ‘ಸ್ಪೈನ್ ಆ್ಯಂಡ್ ಜಾಯಿಂಟ್ ಎಕ್ಸ್-ರೇ - ಸ್ಪೈನ್ ಟು ಸೈನೋವಿಯಂ: ಎ ಕ್ಲಿನಿಷಿಯನ್ಸ್ ಗೈಡ್ ಟು ಸ್ಕೆಲಿಟಲ್ ಎಕ್ಸ್-ರೇ’ ಎಂಬ ವಿಷಯದ ಕುರಿತು ಮಣಿಪಾಲ ಹೆಲ್ತ್ ಮ್ಯಾಪ್‌ನ ತಾಂತ್ರಿಕ ಮತ್ತು ವೈದ್ಯಕೀಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಜಾ. ಪ್ರವೀಣ್ ಶಾಸ್ತ್ರಿ ‘ಸಿ.ಟಿ. ಬ್ರೈನ್ ಇಂಟರ್ಪ್ರಿಟೇಷನ್ - ಫ್ರೊಮ್ ಬ್ಲೀಡ್ಸ್ ಟು ಬ್ಲಾಕ್ಸ್: ಎ ಕ್ವಿಕ್ ಗೈಡ್ ಟು ಸಿ.ಟಿ. ಬ್ರೈನ್’ ಎಂಬ ವಿಷಯದ ಮಾರ್ಗದರ್ಶನವನ್ನು ನೀಡಿದರು.ವಿಭಾಗ ಮುಖ್ಯಸ್ಥ ಡಾ. ನಾಗರಾಜ್ ಎಸ್. ಸ್ವಾಗತಿಸಿದರು. ಸಹಪ್ರಾಧ್ಯಾಪಕ ಡಾ. ಅರುಣ್ ಕುಮಾರ್ ಎಂ. ವಂದಿಸಿದರು.ಉಪಪ್ರಾಂಶುಪಾಲ ಡಾ. ನಿರಂಜನ್ ರಾವ್, ಸ್ನಾತಕೋತ್ತರ ಡೀನ್ ಶ್ರೀಕಾಂತ್ ಪಿ., ಉಪಸ್ಥಿತರಿದ್ದರು. ದೇಶದ ವಿವಿಧ ಭಾಗಗಳಿಂದ ೧೦೦ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಈ ಅಧಿವೇಶನದಲ್ಲಿ ಭಾಗವಹಿಸಿದರು.