ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲಾ ಪಂಚಾಯಿತಿ ಹಾಗೂ ಕಾಪು ತಾಲೂಕು ಪಂಚಾಯಿತಿ ವತಿಯಿಂದ ಜಿಲ್ಲೆಯ 4 ಅಕ್ಕ ಸಂಜೀವಿನಿ ಅಂಗಡಿ ಮೂಲಕ ತಯಾರಿಸಿದ ದೀಪಾವಳಿ ಗಿಫ್ಟ್ ಬಾಕ್ಸ್‌ಗಳನ್ನು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಿದರು.ಈ ಸಂದರ್ಭ ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಸಹಾಯಕ ಆಯುಕ್ತೆ ರಶ್ಮಿ, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಯೋಜನಾ ನಿರ್ದೇಶಕ ವಿಜಯ್ ಕುಮಾರ್, ಕಾಪು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಡಿಸಿಲ್ವಾ ಹಾಗೂ ಸಂಜೀವಿನಿ ಯೋಜನೆಯ ಜಿಲ್ಲಾ ಮತ್ತು ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.ಕಟಪಾಡಿಯ ಅಕ್ಕ ಸಂಜೀವಿನಿ ಅಂಗಡಿಯ ಡ್ರೈ ಫ್ರೂಟ್ಸ್ ಗಿಫ್ಟ್ ಬಾಕ್ಸ್, ಪಡುಬಿದ್ರೆ ಹಾಗೂ ಶಿರ್ವ ಅಕ್ಕ ಅಂಗಡಿಯ ಸದಸ್ಯರು ತಯಾರಿಸಿದ ವಿವಿಧ ಬಗೆಯ ಲಡ್ಡು, ಸ್ವೀಟ್ಸ್, ಸಿಹಿ ತಿನಿಸುಗಳು ಹಾಗೂ ಬೆಳಪು ಅಕ್ಕ ಅಂಗಡಿಯ ಗೋಉತ್ಪನ್ನಗಳಿಂದ ತಯಾರಿಸಿದ ಪೂಜಾ ಸಾಮಗ್ರಿಗಳ ಈ ಬಾಕ್ಸ್‌ಗಳನ್ನು ದೀಪಾವಳಿಯ ಉಡುಗೊರೆ ನೀಡಲು ವಿನ್ಯಾಸಗೊಳಿಸಲಾಗಿದೆ. ಈ ದೀಪಾವಳಿ ಉಡುಗೊರೆ ಬೇಕಾದಲ್ಲಿ ಲಕ್ಷ್ಮೀ (೮೧೪೭೮೫೨೯೯೦) ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.