ಉಡುಪಿ: ಅಶೋಕ್ ಬಾಳಿಗಾಗೆ ಸನ್ಮಾನ

| Published : Dec 04 2024, 12:34 AM IST

ಸಾರಾಂಶ

ಸುಮಾರು 23 ವರ್ಷಗಳಿಂದ ಕ್ರೀಡಾ ಲೇಖನ ಬರೆಯುತ್ತಿರುವ ಉಡುಪಿಯ ಅಶೋಕ ಬಾಳಿಗಾ ಅವರನ್ನು ‘ನೆನಪುಗಳ ಮಾತು ಮಧುರ’ ಸಂದರ್ಶನದಲ್ಲಿ ಸನ್ಮಾನಿಸಲಾಯಿತು.

ಉಡುಪಿ: ಸುಮಾರು 23 ವರ್ಷಗಳಿಂದ ಕ್ರೀಡಾ ಲೇಖನ ಬರೆಯುತ್ತಿರುವ ಉಡುಪಿಯ ಅಶೋಕ ಬಾಳಿಗಾ ಅವರನ್ನು ‘ನೆನಪುಗಳ ಮಾತು ಮಧುರ’ ಸಂದರ್ಶನದಲ್ಲಿ ಸನ್ಮಾನಿಸಲಾಯಿತು.

ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಕೆ. ಸುರೇಶ್ ಭಟ್ ಸಂದರ್ಶನ ನಡೆಸಿಕೊಟ್ಟರು. ಸನ್ಮಾನ ಸಮಾರಂಭದಲ್ಲಿ ಕೆಎಸ್‌ಸಿಎ ಸಂಯೋಜಿತ ಗ್ಯಾಲಕ್ಸಿ ಕ್ರಿಕೆಟ್ ಅಕಾಡೆಮಿ ಸ್ಥಾಪಕ ಅಲೆವೂರು ಸುರೇಶ್ ಕಿಣಿ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಹಾಗೂ ಸ್ಪೋರ್ಟ್ಸ್ ಕನ್ನಡ ಕಚೇರಿ ಮಾಲಕ ಪಿ.ಕೆ. ಭಂಡಾರಿ, ಉಡುಪಿ ಸ್ಪೋರ್ಟಿವ್ ಕ್ರಿಕೆಟರ್ಸ್ ಕ್ರಿಕೆಟ್ ಸಂಸ್ಥೆಯ ತರಬೇತುದಾರ ದೀಪಕ್ ಯು., ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ರಿಕ್ರಿಯೇಷನ್ ಕ್ಲಬ್ ಕ್ರಿಕೆಟ್ ಆಟಗಾರ ಯಾದವ ನಾಯಕ್ ಕೆಮ್ಮಣ್ಣು, ಮುಖ್ಯಪ್ರಾಣ ಟವರ್ಸ್ ಉಡುಪಿ ಅಧ್ಯಕ್ಷ ಪ್ರಸನ್ನ ಕುಮಾರ್‌, ಸ್ಪೋರ್ಟ್ಸ್ ಕನ್ನಡ ಸಂಚಾಲಕ ಕೋಟ ರಾಮಕೃಷ್ಣ ಆಚಾರ್ಯ, ಸ್ಪಾರ್ಕ್ ಕ್ರಿಕೆಟರ್ಸ್ ಉಡುಪಿಯ ಕ್ರಿಕೆಟ್ ಆಟಗಾರ ಭಾಸ್ಕರ ಆಚಾರ್ಯ, ಸ್ಪೋರ್ಟ್ಸ್ ಕನ್ನಡ ಚಾನೆಲ್ ಟೆಕ್ನಿಷಿಯನ್ ಇರ್ಷಾದ್, ಕೆ. ಸುರೇಶ್ ಭಟ್ ಮೂಲ್ಕಿ ಮತ್ತು ಶಿವರಂಜನ್ ಬಾಳಿಗಾ ಉಪಸ್ಥಿತರಿದ್ದರು.