ಸಾರಾಂಶ
2 ದಿನಗಳ ಮಹಿಳಾ ಪೊಲೀಸ್ ಸಮಾವೇಶ 2025ಕ್ಕೆ ಗುರುವಾರ ನಗರದ ಜಗನ್ನಾಥ ಸಭಾ ಭವನದಲ್ಲಿ ಚಾಲನೆನೀಡಲಾಯಿತು. ಸಮಾವೇಶವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಉದ್ಘಾಟಿಸಿ ಶುಭ ಹಾರೈಸಿದರು.
ಉಡುಪಿ: ಜಿಲ್ಲಾ ಪೊಲೀಸ್ ವತಿಯಿಂದ ನಡೆಯಲಿರುವ 2 ದಿನಗಳ ಮಹಿಳಾ ಪೊಲೀಸ್ ಸಮಾವೇಶ 2025ಕ್ಕೆ ಗುರುವಾರ ನಗರದ ಜಗನ್ನಾಥ ಸಭಾ ಭವನದಲ್ಲಿ ಚಾಲನೆನೀಡಲಾಯಿತು. ಸಮಾವೇಶವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಣಿಪಾಲ ಸಹಾಯಕ ಪ್ರಾಧ್ಯಾಪಕಿ ಡಾ. ಸುಜಾತ ಬಿ.ಎಸ್., ಭಾಗವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್ ನಾಯ್ಕ್, ಹಾಗೂ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದ ಉಪಸ್ಥಿತರಿದ್ದರು.ಮೊದಲ ದಿನದ ಡಾ. ಸುಜಾತ ಬಿ.ಎಸ್. ಅವರು ಭಾಗವಹಿಸಿದ ಮಹಿಳಾ ಪೊಲೀಸ್ ಸಿಬ್ಬಂದಿಗೆ ‘ಮಹಿಳಾ ಅರೋಗ್ಯ ಸಮಸ್ಯೆ’ಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಡಾ. ಹರ್ಷ ಪ್ರಿಯಂವದ ಅವರು ಆನ್‌ಲೈನ್ ಸೈಬರ್ ಅಪರಾಧಗಳ ಬಗ್ಗೆ ಪೋರ್ಟಲ್ ಬಗ್ಗೆ ತರಬೇತಿ ನೀಡಿದರು. ಪರೀಕದ ಎಸ್‌ಡಿಎಂ ಕೇಂದ್ರದ ವೈದ್ಯಾಧಿಕಾರಿ ಡಾ. ಗೋಪಾಲ ಪೂಜಾರಿ ಯೋಗ ಮತ್ತು ಧ್ಯಾನದ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಹ್ನ 3.30 ಗಂಟೆಯಿಂದ ಭಾಗವಹಿಸಿದ ಮಹಿಳಾ ಸಿಬ್ಬಂದಿಗೆ ಕಲ್ಪನಾ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು.