ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಉಡುಪಿ ಮತ್ತು ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗಳ ಸಹಯೋಗದಲ್ಲಿ ಮಹಿಳೆಯರ ಆಟಿದ ಕೂಟ ಸೊಸೈಟಿಯ ಜಗನ್ನಾಥ ಸಭಾಭವನ ಜರುಗಿತು.
ಉಡುಪಿ: ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಉಡುಪಿ ಮತ್ತು ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗಳ ಸಹಯೋಗದಲ್ಲಿ ಮಹಿಳೆಯರ ಆಟಿದ ಕೂಟ ಸೊಸೈಟಿಯ ಜಗನ್ನಾಥ ಸಭಾಭವನ ಜರುಗಿತು.ಉಡುಪಿ ಶಾಸಕ ಯಶಪಾಲ್ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ, ತಾಯಂದಿರುವ ಆಸಕ್ತಿ ವಹಿಸಿದಾಗ ಇಂತಹ ನಮ್ಮ ಸಂಪ್ರದಾಯಗಳನ್ನು ಉಳಿಸುವುದು ಸಾಧ್ಯ ಎಂದು ಕಾರ್ಯಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಹಿಳಾ ಒಕ್ಕೂಟ ಕಳೆದ 30 ವರ್ಷಗಳಿಂದ ಪ್ರತಿ ವರ್ಷವೂ ವಿವಿಧ ಬಗೆಯ ಕಾರ್ಯಕ್ರಮ ಸಂಘಟಿಸಿ ಬರುವುದರ ಜೊತೆಗೆ ಆಟಿದ ಕೂಟವನ್ನು ಪ್ರತಿ ವರ್ಷ ಮಾಡಿಕೊಂಡು ಬಂದಿದೆ. ಮಹಿಳೆಯರ ಒಗ್ಗಟಿನ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಿದೆ ಎಂದರು.ಒಕ್ಕೂಟದ ಉಪಾಧ್ಯಕ್ಷೆ ಗೀತಾ ವಾಗ್ಲೆ ಬಂಟಕಲ್, ನಮ್ಮ ಪರಿಸರದಲ್ಲಿ ದೊರೆಯುವ ಔಷಧೀಯ ಸಸ್ಯಗಳ ಹಾಗೂ ಆಟಿದ ಊಟ, ತಿನಿಸುಗಳಲ್ಲಿ ಅಡಗಿರುವ ಔಷಧಿ ಗುಣಗಳ ಮಹತ್ವ ಬಗ್ಗೆ ತಿಳಿಸಿ, ಆಷಾಡ ಮಳೆಯ ಸಮಯದಲ್ಲಿ ಇಂತಹ ಆಹಾರ ಸೇವನೆಯಿಂದ ಆರೋಗ್ಯ ರಕ್ಷಣೆ ಸಾಧ್ಯ ಎಂದರು. ಜಿಲ್ಲಾ ಒಕ್ಕೊಟದ ಗೌರವ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಒಕ್ಕೊಟ ಅಧ್ಯಕ್ಷೆ ಪದ್ಮಾ ರತ್ನಾಕರ್ ಸ್ವಾಗತಿದರು, ಜ್ಯೋತಿ ರಾವ್ ಮತ್ತು ರೇವತಿ ನಿರೂಪಿಸಿದರು, ಸಹಾಯ ಮೇರಿ ವಂದಿಸಿದರು.