ಸಾರಾಂಶ
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರಾವಳಿ ಕಾವಲು ಪೊಲೀಸ್ ಕಚೇರಿಯ ವಿಭಾಗೀಯ ಅಧೀಕ್ಷಕಿ ಸುಮಾ ಬಿ.ಎಸ್. , ರಂಗಭೂಮಿ, ಸಿನೆಮಾ ನಟಿ ಜಯಶ್ರೀ ಕೋಟ್ಯಾನ್ ಕಟಪಾಡಿ, ಸಹಾಯಕ ಆಡಳಿತ ಅಧಿಕಾರಿ ಮಂಜುಳಾ ಎಸ್. ಗೌಡ, ಉದ್ಯಮಿ ಕವಿತಾ ಲಕ್ಷ್ಮೀಶ ಅವರು ಬೆಲ್ಜಿಯಂ ಕಲೆಕ್ಷನ್, ಫ್ರೆಂಚ್ ಕಲೆಕ್ಷನ್, ಯುಎಸ್ ಕಲೆಕ್ಷನ್, ಟರ್ಕಿಸ್ ಕಲೆಕ್ಷನ್, ಟ್ರೆಡಿಷನ್ ಕಲೆಕ್ಷನ್ ಹಾಗೂ ಮಿಡ್ಲ್ ಈಸ್ಟ್ ಕಲೆಕ್ಷನ್‌ಗಳನ್ನು ಅನಾವರಣಗೊಳಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ವಿಎಸ್‌ಟಿ ರಸ್ತೆಯ ವೆಸ್ಟ್‌ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ಸೆ.25ರ ವರೆಗೆ ಹಮ್ಮಿಕೊಳ್ಳಲಾದ ವಿಶ್ವ ವಜ್ರ- ಡೈಮಂಡ್ ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರಾವಳಿ ಕಾವಲು ಪೊಲೀಸ್ ಕಚೇರಿಯ ವಿಭಾಗೀಯ ಅಧೀಕ್ಷಕಿ ಸುಮಾ ಬಿ.ಎಸ್. , ರಂಗಭೂಮಿ, ಸಿನೆಮಾ ನಟಿ ಜಯಶ್ರೀ ಕೋಟ್ಯಾನ್ ಕಟಪಾಡಿ, ಸಹಾಯಕ ಆಡಳಿತ ಅಧಿಕಾರಿ ಮಂಜುಳಾ ಎಸ್. ಗೌಡ, ಉದ್ಯಮಿ ಕವಿತಾ ಲಕ್ಷ್ಮೀಶ ಅವರು ಬೆಲ್ಜಿಯಂ ಕಲೆಕ್ಷನ್, ಫ್ರೆಂಚ್ ಕಲೆಕ್ಷನ್, ಯುಎಸ್ ಕಲೆಕ್ಷನ್, ಟರ್ಕಿಸ್ ಕಲೆಕ್ಷನ್, ಟ್ರೆಡಿಷನ್ ಕಲೆಕ್ಷನ್ ಹಾಗೂ ಮಿಡ್ಲ್ ಈಸ್ಟ್ ಕಲೆಕ್ಷನ್‌ಗಳನ್ನು ಅನಾವರಣಗೊಳಿಸಿದರು.ಪ್ರಥಮ ಗ್ರಾಹಕರಾದ ಸಂಗೀತಾ ಪ್ರಕಾಶ್ ಶೆಟ್ಟಿ ಹಾಗೂ ಪರ್ವ ಎರ್ಮಾಳ್ ಅವರಿಗೆ ಚಿನ್ನಾಭರಣವನ್ನು ಅತಿಥಿಗಳು ಹಸ್ತಾಂತರಿಸಿದರು. ಮೊಯ್ದೀನ್ ದರ್ಕಾಸ್ ಮುಳೂರು, ಎಂ.ಎಸ್. ಮುಬಿನ್ ವಿಶೇಷ ಅತಿಥಿಗಳಾಗಿದ್ದರು. ನಮ್ಮೂರು ಕುಡ್ಲ ಚಲನಚಿತ್ರದ ನಟ ಅನೂಪ್ ಶುಭಹಾರೈಸಿದರು. ಸುಲ್ತಾನ್ ಗೋಲ್ಡ್ ಉಡುಪಿ ಬ್ರಾಂಚ್ ಮ್ಯಾನೇಜರ್ ರಾಗೀನ್, ಸೇಲ್ಸ್ ಮ್ಯಾನೆಜರ್ ಅಬ್ದುಲ್ ವಾಹಿದ್ ಪಿ.ಎಂ., ಸುಲ್ತಾನ್ ಗ್ರೂಪ್ ಉಡುಪಿ ಫ್ಲೋರ್ ಮ್ಯಾನೇಜರ್ ಸಿದ್ದಿಕ್ ಹಸನ್, ಮಾರ್ಕೆಟಿಂಗ್ ಮ್ಯಾನೇಜರ್ ರಿಫಾ ಆಗಾ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಸ್ಟೀವನ್ ಕುಲಾಸೊ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.ವಿಶ್ವದ ವಿವಿಧ ದೇಶಗಳ ವಿವಿಧ ಹೊಸ ಮಾದರಿಯ ಡೈಮಂಡ್‌ಗಳ ಸಂಗ್ರಹ ಈ ಪ್ರದರ್ಶನದಲ್ಲಿದೆ. ಪ್ರದರ್ಶನದಲ್ಲಿ ಐಷರಾಮಿ ವಜ್ರಾಭರಣಗಳ ಸಂಗ್ರಹ, ಸಾಲಿಟೈರ್ ಕಲೆಕ್ಷನ್, ಸಾಂಪ್ರದಾಯಿಕ ಶೈಲಿಯ ವಜ್ರಾಭರಣಗಳು, ತನ್ಮನಿಯಾ ಕಲೆಕ್ಷನ್, ಬ್ರೈಡಲ್ ವಜ್ರಾಭರಣ ಕಲೆಕ್ಷನ್, ಅನ್ಕಟ್ ಡೈಮಂಡ್, ರುಬಿ ಎಮೆರಾಲ್ಡ್ ಜೆಮ್ ಸ್ಟೋನ್ ಕಲೆಕ್ಷನ್ಗಳ ಸಂಗ್ರಹ ಇವೆ. ಪ್ರತಿ ಡೈಮಂಡ್ ಕ್ಯಾರೆಟ್ ಮೇಲೆ 8000 ರು. ರಿಯಾಯಿತಿ ನೀಡಲಾಗುವುದು ಎಂದು ಉಡುಪಿ ಬ್ರಾಂಚ್ ಮ್ಯಾನೇಜರ್ ತಿಳಿಸಿದ್ದಾರೆ.