ಉಡುಪಿ: ಯಕ್ಷಗಾನ ಕಲಾರಂಗ 50ನೇ ವಾರ್ಷಿಕ ಮಹಾಸಭೆ

| Published : Jul 19 2025, 01:00 AM IST

ಉಡುಪಿ: ಯಕ್ಷಗಾನ ಕಲಾರಂಗ 50ನೇ ವಾರ್ಷಿಕ ಮಹಾಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ಯಕ್ಷಗಾನ ಕಲಾರಂಗದ ೫೦ನೆಯ ವಾರ್ಷಿಕ ಮಹಾಸಭೆ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಎಂ. ಗಂಗಾಧರ ರಾವ್‌ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿಯ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗದ ೫೦ನೆಯ ವಾರ್ಷಿಕ ಮಹಾಸಭೆ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಎಂ. ಗಂಗಾಧರ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್. ವಿ. ಭಟ್ ಸ್ವಾಗತಿಸುವುದರ ಮೂಲಕ ಮಹಾಸಭೆ ಪ್ರಾರಂಭವಾಯಿತು. ಮಹಾಸಭೆಯ ಕಲಾಪಗಳಾದ ಗತ ಮಹಾಸಭೆಯ ವರದಿ, ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರ ಮಂಡನೆಗಳನ್ನು ಅನುಕ್ರಮವಾಗಿ ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಮಾಡಿದರು.ನಂತರ ಕಾರ್ಯಕಾರಿ ಸಮಿತಿ ಮತ್ತು ಸಲಹಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಲೆಕ್ಕಪರಿಶೋಧಕರಾಗಿ ಸಿಎ ಅರುಣ್ ನಾಯಕ್‌ ಅವರನ್ನು ನೇಮಕಗೊಳಿಸಲಾಯಿತು. ವರದಿ ವರ್ಷದಲ್ಲಿ ಅಗಲಿದ ಸಂಸ್ಥೆಯ ಸದಸ್ಯರು ಹಾಗೂ ಕಲಾವಿದರಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ನುಡಿನಮನ ಸಲ್ಲಿಸಿದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಎಲ್ಲರ ಸಹಕಾರದಿಂದ ಸಂಸ್ಥೆ ಕಲೆ, ಕಲಾವಿದರು, ವಿದ್ಯಾರ್ಥಿಗಳಿಗಾಗಿ ಸಾಮಾಜಿಕರು ಮೆಚ್ಚುವ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿದರು. ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ವಿದ್ಯಾಪ್ರಸಾದ್ ಧನ್ಯವಾದ ಸಲ್ಲಿಸಿದರು.