ಉಡುಸಲಮ್ಮದೇವಿ ಅದ್ಧೂರಿ ರಥೋತ್ಸವ

| Published : Apr 23 2024, 12:50 AM IST

ಸಾರಾಂಶ

ಪಟ್ಟಣದ ಗ್ರಾಮದೇವತೆ ಉಡಸಲಮ್ಮ ದೇವಿಯ ರಥೋತ್ಸವ ಅದ್ಧೂಯಾಗಿ ನಡೆಯಿತು. ಮಧ್ಯಾಹ್ನ ಉಡುಸಮ್ಮ ದೇವಿಯ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು

ತುರುವೇಕೆರೆ: ಪಟ್ಟಣದ ಗ್ರಾಮದೇವತೆ ಉಡಸಲಮ್ಮ ದೇವಿಯ ರಥೋತ್ಸವ ಅದ್ಧೂಯಾಗಿ ನಡೆಯಿತು. ಮಧ್ಯಾಹ್ನ ಉಡುಸಮ್ಮ ದೇವಿಯ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ರಥಕ್ಕೆ ಬಾಳೆ ಹಣ್ಣು ಎಸೆದರು. ಭಕ್ತಾದಿಗಳಿಗೆ ಪಾನಕ, ಫಲಹಾರ, ಮಜ್ಜಿಗೆ, ಮೊಸರನ್ನ ಕೋಸಂಬರಿಯನ್ನು ವಿತರಿಸಲಾಯಿತು. ಟಿ.ಕೆ.ಶ್ರೀನಿವಾಸ್, ಪರಶುರಾಮಯ್ಯ, ಶೇಖರ್, ಆರ್.ಮಲ್ಲಿಕಾರ್ಜುನ್, ಈ ದಿನದ ಸೇವಾಕರ್ತರಾದ ಇಂಜಿನಿಯರ್ ಬಾವಿಕೆರೆ ರಾಮಚಂದ್ರು, ಲಚ್ಚಿಬಾಬು, ಬಾಗೇರಿರಮೇಶ್, ಅಣ್ಣದೊರೆ, ಗೋವಿಂದಯ್ಯ, ಶ್ರೀಕಾಂತ್ ಅರಸ್, ಅರ್ಚಕರಾದ ರಾಮಚಂದ್ರಯ್ಯ, ಪುನೀತ್, ಅಪಾರ ಭಕ್ತರು ಪಾಲ್ಗೊಂಡಿದ್ದರು.