ಉದ್ಯಾವರ ಶಾಲೆ: ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನ

| Published : Sep 03 2025, 01:02 AM IST

ಸಾರಾಂಶ

ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ 2025-26 ನೇ ಸಾಲಿನ ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ‘ಚಿಗುರು’ ನಡೆಯಿತು.

ಉದ್ಯಾವರ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26 ನೇ ಸಾಲಿನ ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ‘ಚಿಗುರು’ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಗಣಪತಿ ಕಾರಂತ, ಬಾಲ ಪ್ರತಿಭೆಗಳ ಅನಾವರಣಗೊಳಿಸಲು ಚಿಗುರು ಒಂದು ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶ್, ನಿವೃತ್ತ ಮುಖ್ಯ ಶಿಕ್ಷಕಿ ಮತ್ತು ಸಾಂಸ್ಕೃತಿಕ ಚಿಂತಕಿ ಹೇಮಲತಾ, ಕನ್ನಡ ಸಾಹಿತ್ಯ ಪರಿಷತ್‌ನ ಕಾಪು ತಾಲೂಕು ಘಟಕದ ಜತೆ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್, ಶಾಲೆಯ ಬೋಧಕ ಮತ್ತು ಬೋದಕೇತರ ವರ್ಗ, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವರ್ಷಾ ಬಿ. ಕೋಟ್ಯಾನ್ ನಿರೂಪಿಸಿ, ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನುರಾಧ ಪಿ. ಶೆಟ್ಟಿ ವಂದಿಸಿದರು.ನಂತರ ಅಭಿರಾಮ್ ಪಾಠಕ್ ಮತ್ತು ತಂಡದಿಂದ ಏಕವ್ಯಕ್ತಿ ಪ್ರದರ್ಶನ, ವೀಕ್ಷಿತಾ ಮತ್ತು ತಂಡದಿಂದ ಸುಗಮ ಸಂಗೀತ, ಶ್ರೀ ವಿಶ್ವ ಯಕ್ಷ ನೃತ್ಯ ಕಲಾ ನಿಕೇತನ ನೀಲಾವರ ಇದರ ಸಂಚಿತಾ ಮತ್ತು ತಂಡದಿಂದ ಶಾಸ್ತ್ರೀಯ ನೃತ್ಯ, ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಭವಿಷ್ ಮತ್ತು ತಂಡದಿಂದ ಜನಪದ ಗೀತೆ, ಶ್ರೀ ಸಾಯಿ ಸ್ವರಾಂಜಲಿ ಹೊಸೂರು ಕರ್ಜೆ ಇದರ ಎಚ್ ಪ್ರಣತಿ ಭಟ್ ಮತ್ತು ತಂಡದಿಂದ ಶಾಸ್ತ್ರಿಯ ಸಂಗೀತ ಮತ್ತು ಡಾ.ಚಂದ್ರಶೇಖರ್ ಕಂಬಾರ ಇವರು ರಚಿಸಿ ಶ್ರೀ ಸಂತೋಷ ನಾಯಕ್ ಪಟ್ಲ ಇವರು ನಿರ್ದೇಶಿಸಿದ ‘ಪುಷ್ಪ ರಾಣಿ’ ನಾಟಕವು ಎಸ್.ವಿ.ಎಸ್ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪ್ರದರ್ಶನ ನಡೆಯಿತು .